ಟೈರ್ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಓಲ್ಡ ಪಿಬಿ ರಸ್ತೆಯಲ್ಲಿ ನಡೆದಿದೆ.
ನಗರಸಭೆ ಮುಂಭಾಗದಲ್ಲಿ ಉತ್ತಮ ಮಧುಕರ ಜಾಧವ ಮಾಲಿಕತ್ವದ ಟೈರ್ ಮಾರಾಟ ಪಂಕಚ್ಚರ್ ಅಂಗಡಿಯು ಹೊತ್ತಿ ಉರಿದು ಸುಟ್ಟುಕರಲಾಗಿದೆ.ಮಾಲಿಕ ಉತ್ತಮ ಎಂದಿನಂತೆ ಅಂಗಡಿ ಮುಚ್ಚಿ ಮನೆಗೆ ಹೋದ ನಂತರ ಟೈರ್ ಗಳು ಬೆಂಕಿಗೆ ಆಹುತಿಯಾಗಿವೆ.ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.ಯಾವುದೇ ಪ್ರಯೋಜನೆ ಆಗಲಿಲ್ಲ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

 
			 
 
 
  
					 
				 
						  
						  
						  
						  
						 
						 
						