ಚಿಕ್ಕೋಡಿ: ಕಬ್ಬಿಗೆ ಸೂಕ್ತವಾದ ಬೆಂಬಲವನ್ನು ನೀಡಬೇಕು ಎಂದು ಆಗ್ರಹಿಸಿ ರೈತರು ನಿಪ್ಪಾಣಿಯ ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಸೂಕ್ತವಾದ ಬೆಂಬಲ ನೀಡಬೇಕೆಂದು ಹೋರಾಟ ತೀವ್ರಗೊಂಡಿದೆ.ಒಂದು ಕಡೆ ಗುರ್ಲಾಪೂರ ಕ್ರಾಸ್ ನಲ್ಲಿ ರೈತರಿಂದ ಬೃಹತ್ ಹೋರಾಟ ನಡೆಯುತ್ತಿದೆ.ಇತ್ತ ನಿಪ್ಪಾಣಿಯ ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ರೈತರು ಹೋರಾಟವನ್ನು ಮಾಡುತ್ತಿದ್ದಾರೆ.ಕಬ್ಬು ತುಂಬಿದ ಟ್ರ್ಯಾಕ್ಟರಗಳನ್ನು ತಡೆದು ಚಾಲಕರಿಗೆ ಗುಲಾಬಿ ಹೂವುಗಳನ್ನು ನೀಡಿ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಆಗದೆ ಹೊರತು ಕಬ್ಬು ಸಾಗಾಟ ಮಾಡಬಾರದೆಂದು ಮನವಿಯನ್ನು ಮಾಡಿಕೊಂಡರು.
ರೈತಪರ ಹೋರಾಟಗಾರ ರಮೇಶ ಪಾಟೀಲ ಮಾತನಾಡಿ ರೈತರು ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ದುಡಿದು ಕಬ್ಬನ್ನು ಬೆಳೆದಿದ್ದಾರೆ.ಅದಕ್ಕೆ ಸೂಕ್ತವಾದ ಬೆಂಬಲ ಬೆಲೆಯನ್ನು ಕಾರ್ಖಾನೆಯವರು ನೀಡಲೇಬೇಕು.ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿದು ಎಂದರು

 
			 
 
 
  
					 
				 
						  
						  
						  
						  
						 
						 
						