ವಿ.ಎಲ್. ಪಾಟೀಲ ಕುಟುಂಬದ ಅಭಿಮಾನಿ ಬಳಗ ಪಟ್ಟಣದ ಮಹಿವೀರ ಭವನದಲ್ಲಿ ಬೃಹತ್ ಸಭೆ ನಡೆಸಿ ತಹಶೀಲದಾರ ಮಹಾದೇವ ಸನ್ಮೂರಿ ಅವರಿಗೆ ಮನವಿ ಸಲ್ಲಿಸಿದರು.

ಶಿವರಾಜ ಪಾಟೀಲರ ಮೇಲೆ ಮಾಡಿರುವ ಸುಳ್ಳು ಎಪ್.ಐ.ಅರ್. ಖಂಡಿಸಿ ಅಂಬೇಡ್ಕರ ವೃತ್ತದಿಂದ ಮಹಾವೀರ ಭವನದವರರೆಗೆ ಪ್ರತಿಭಟನೆ ಮೆರವಣಿಗೆ ವಿ.ಎಲ್. ಪಾಟಿಲ ಕುಟುಂಬದ ಅಭಿಮಾನಿ ಬಳಗ ಹಾಗೂ ಸಾರ್ವಜನಿಕರು ಕೈಕೊಂಡಿದ್ದರು.
ಕೇಲವು ದಿನಗಳ ಹಿಂದೆ ಕುಡಚಿ ಮತಕ್ಷೇತ್ರದ ಹಾರುಗೇರಿ ಠಾಣೆ ವ್ಯಾಪ್ತಿಯಲ್ಲಿ ಬರುವ ಇಟನಾಳ ಗ್ರಾಮದಲ್ಲಿ ಒಂದು ಜಗಳ ನಡೆದಿತ್ತು.
ಸೀಮಿ ನ್ಯಾಯ ಸಲುವಾಗಿ ಎರಡು ರೈತ ಕುಟುಂಬಗಳ ನಡುವೆ ಜಗಳ ನಡೆದ ಸಂದರ್ಭದಲ್ಲಿ ಜೆ.ಡಿ.ಎಸ್. ಪಕ್ಷದ ರಾಷ್ಟಿçಯ ಉಪಾಧ್ಯಕ್ಷರ ಸುಪುತ್ರರಾದ ಶಿವರಾಜ ಪಾಟೀಲರವರು ರಾಯಬಾಗ ಮತಕ್ಷೇತ್ರದ ಬ್ಯಾಕೂಡ ಗ್ರಾಮದ ತಮ್ಮ ಮನೆಯಲ್ಲಿ ಇದ್ದರು. ಅದೇ ದಿನ ಬೆಳಗಾವಿ ಡಿಸಿಸಿ ಬ್ಯಾಂಕ್ ಮಾಜಿ ಚೇರಮನ್ ರಮೇಶ ಕತ್ತಿ ಬ್ಯಾಕೂಡ ಗ್ರಾಮಕ್ಕೆ ಆಗಮಿಸಿದ್ದರು. ಅವರೊಂದಿಗೆ ಪ್ರತಾಪರಾವ ಪಾಟೀಲ ಮತ್ತು ಶಿವರಾಜ ಪಾಟೀಲ ಹಾಗೂ 50ಕ್ಕೂ ಹೆಚ್ಚು ಜನರು ಸೇರಿ ಮಾತುಕತೆಯಲ್ಲಿ ಭಾಗವಹಿಸಿದ್ದರು.
ಇಟನಾಳ ಗ್ರಾಮದಲ್ಲಿ ನಡೆದ ಘಟನೆಯ ದಿನ ಶಿವರಾಜ ಪಾಟೀಲರು ಮನೆಯಲ್ಲಿಯೇ ಇದ್ದಿದ್ದರಿಂದ ಈ ಘಟನೆಗೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಘಟನೆ ನಡೆದ ಸ್ಥಳದಲ್ಲಿಯೇ ಇರದ ಶಿವರಾಜ ಪಾಟೀಲ ಅವರನ್ನು ಯಾವುದೇ ವಿಚಾರ ಗೊತ್ತಿರದೇ ಬೇಕಂತಲೇ ಆರೋಪಿ ನಂ.1 ಅಂತಾ ಮಾಡಿದ್ದಾರೆ.
ಇದು ಸತ್ಯಕ್ಕೆ ದೂರವಾದ ಮಾತು.
ಕುಡಚಿ ಮತಕ್ಷೇತ್ರದಲ್ಲಿ ಜೆ.ಡಿ.ಎಸ್. ಪಕ್ಷವನ್ನು ಬಲವಾಗಿ ಕಟ್ಟುತ್ತಿರುವ ಶಿವರಾಜ ಪಾಟೀಲರ ಮಾನನಷ್ಟ ಮತ್ತು ತೇಜೋವಧೇ ಮಾಡಲು ಹೊರಟಿರುವಂತೆ ಈ ಪ್ರಕರಣ ಕಾಣೂತ್ತಿದೆ ಶಿವರಾಜ ಪಾಟೀಲರ ಮೇಲೆ ಸುಳ್ಳು ಪ್ರಕರಣದಡಿ ಎಫ್.ಐ.ಆರ್. ಮಾಡಿರುವುದರಿಂದ ಮಾನ್ಯ ಬೆಳಗಾವಿ ಎಸ್.ಪಿ.ರವರು ಈ ಪ್ರಕರಣವನ್ನು ತನಿಖೆ ಮಾಡಬೇಕು. ಸುಳ್ಳು ಆರೋಪ ಮಾಡಿರುವ ಹಾರುಗೇರಿ ಠಾಣೆಯ ಮೇಲೆ ನಮಗೆ ನಂಬಿಕೆ ಇರದ ಕಾರಣಕ್ಕಾಗಿ ಎಸ್.ಪಿ.ಯವರು ವಿಶೇಷ ತನಿಖಾಧಿಕಾರಿಯನ್ನು ನೇಮಿಸಿ ನಮಗೆ ಸೂಕ್ತ ನ್ಯಾಯ ಒದಗಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಂದು ಮನವಿ ಪತ್ರದದಲ್ಲಿ ತಿಳಿಸಿರುತ್ತಾರೆ.
ಈ ಸಂದರ್ಬದಲ್ಲಿ ಜೆ.ಡಿ.ಎಸ್. ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ, ಸಿದ್ದಪ್ಪ ಹುಕ್ಕೇರಿ, ಕಾಡಯ್ಯ ಸ್ವಾಮಿಜಿ, ಪ್ರಕಾಶ ಹುಕ್ಕೇರಿ, ಲಕ್ಮೀಕಾಂತ ದೇಸಾಯಿ ನ್ಯಾಯವಾದಿ ಪಿ.ಎಂ.ಪಾಟೀಲ, ಭೀಮಪ್ಪ ಬನಶಂಕರಿ, ಹಾಲಪ್ಪ ಪೂಜೇರಿ, ಪ್ರವೀನ ಗಡ್ಡೆ, ರವಿ ತರಾಳ, ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಯುವಕರು ಮುಖಂಡರು, ಮಹಿಳೆಯರು ಅಪಾರ ಪ್ರಮಾಣದಲ್ಲಿ ಉಪಸ್ಥಿತರಿದ್ದರು.
