ರೋಟರಿ ಕ್ಲಬ್ ಆಫ್ ಬೆಲಗಾಮ್ ಮಿಡ್’ಟೌನ್’ನ ವತಿಯಿಂದ ಎಂಡ್ ಪೊಲೀಯೋ ನವ್ ಜಾಗೃತಿ ರ್ಯಾಲಿಯನ್ನು ನಡೆಸಲಾಯಿತು. ಇದರಲ್ಲಿ ಬಾರ್ ಅಸೋಸಿಯೇಷನ್ ಸದಸ್ಯರು ಕೂಡ ಭಾಗಿಯಾದರು.
ಇಂದು ಅಕ್ಟೋಬರ್ 24 ವಿಶ್ವ ಪೊಲಿಯೋ ನಿರ್ಮೂಲನಾ ದಿನದ ಅಂಗವಾಗ ಬೆಳಗಾವಿ ನಗರದಲ್ಲಿ ರೋಟರಿ ಕ್ಲಬ್ ಆಫ್ ಬೆಲಗಾಮ್ ಮಿಡ್’ಟೌನ್’ನ ವತಿಯಿಂದ ಎಂಡ್ ಪೊಲೀಯೋ ನವ್ ಜಾಗೃತಿ ರ್ಯಾಲಿಯನ್ನು ನಡೆಸಲಾಯಿತು. ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭಗೊಂಡ ರ್ಯಾಲಿಯೂ ಕಾಲೇಜ್ ರಸ್ತೆ, ತ್ಯಾಗವೀರ ಸಿರಸಂಗಿ ಲಿಂಗರಾಜ್ ಅರಸ್ ವೃತ್ತ, ಯಂದೇ ಖೂಟ್ ಮಾರ್ಗವಾಗಿ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ ವೃತ್ತಕ್ಕೆ ತಲುಪಿ ಕೊನೆಗೊಂಡಿತು.
ಇಂದು ಪೊಲಿಯೋ ದಿನದ ನಿಮಿತ್ಯ ರೋಟರಿ ಕ್ಲಬ್ ಜಾಗೃತಿಯನ್ನು ಮೂಡಿಸುತ್ತಿದೆ. ಈಗಾಗಲೇ ಜಗತ್ತಿನಲ್ಲಿ ಶೇ.90 ರಷ್ಟು ಪೊಲಿಯೋ ನಿರ್ಮೂಲನೆಯಾಗಿದೆ. ಪಾಕಿಸ್ತಾನ, ನೈಜಿರಿಯಾ, ಅಫಘಾನಿಸ್ತಾನ ಸೇರಿದಂತೆ ಕೆಲವೊಂದು ದೇಶಗಳಲ್ಲಿ ಮಾತ್ರ ಉಳಿದುಕೊಂಡಿದೆ. ಅದನ್ನು ಕೂಡ ನಿರ್ಮೂಲನೆಗೊಳಿಸಲು ರೋಟರಿ ಕ್ಲಬ್ ಶ್ರಮಿಸಲಿದೆ ಎಂದು ರೋಟೆರಿಯನ್ ಅವಿನಾಶ್ ಪೋತದಾರ ಹೇಳಿದರು.
ರೋಟರಿ ಕ್ಲಬ್ ಕಳೆದ ಹಲವಾರು ವರ್ಷಗಳಿಂದ ಪೊಲಿಯೋ ನಿರ್ಮೂಲನೆಗಾಗಿ ಶ್ರಮಿಸುತ್ತಿದೆ. ಅಕ್ಟೋಬರ್ 24 ಪೊಲಿಯೋ ನಿರ್ಮೂಲನಾ ದಿನವಾಗಿದ್ದು, ಇಂದು ಇದಕ್ಕಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಮೆಂದ್ರ ಪೋರವಾಲ್ ಹೇಳಿದರು.
ಈ ಸಂದರ್ಭದಲ್ಲಿ ರೋಟರಿಯನ್’ಗಳು ಮತ್ತು ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ದೀವಟೆ ಸೇರಿದಂತೆ ಇನ್ನುಳಿದ ಸದಸ್ಯರು ಭಾಗಿಯಾಗಿದ್ಧರು.

