ವಿಜಯಪುರ ವಿಜಯಪುರ ತಾಲೂಕಿನ
ಕನ್ನೂರು ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಬೆಳ್ಳುಂಡಗಿ ಹಾಗೂ ಇಸಾಕ್ ಖರೇಷಿ ಕೊಲೆ ಮಾಡಿದ ಆರೋಪಿಗಳ ಬಂಧಿಸಲಾಗಿದೆ. ಒಟ್ಟು ಐದು ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಓರ್ವ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ
ಬೈಕ್ ಹಾಯಿಸಿ ಹಲ್ಲೆ ಮಾಡಿ ಪರಾರಿಯಾಗಲು ಓರ್ವ ಆರೋಪಿ ಯತ್ನಿಸಿದ ಅಕ್ಷಯ ಶಿವಾನಂದ ಜುಲಜುಲೆ ಎಂಬ ಆರೋಪಿ ಮೇಲೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಾಯಗೊಂಡ ಜನಾರ ಪೈರಿಂಗ್ ಮಾಡಿ ಎಚ್ಚರಿಕೆ ನೀಡಲು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಆರೋಪಿ ಬಂಧನಕ್ಕೆ ಮೂರು ಸುತ್ತು ಗುಂಡು ಹಾರಿಸಿದ ಪರಿಣಾಮ ಆರೋಪಿ ಅಕ್ಷಯ ಜುಲಜುಲೆ ಬಲ ಮೊಳಕಾಲು ಕೆಳಗೆ ಗುಂಡು ತಾಗಿದೆ. ಬಳಿಕ ಜಿಲ್ಲಾಸ್ಪತ್ರೆಗೆ ಆರೋಪಿಯನ್ನು ದಾಖಲಿಸಲಾಗಿದೆ. ಇತರೆ ನಾಲ್ವರು ಆರೋಪಿಗಳಾದ
ಭರತ, ಸಂಜಯ್, ಸಂತೋಷ, ಮಲ್ಲನಗೌಡ ಎಂಬುವವರನ್ನು ಬಂಧಿಸಲಾಗಿದೆ. ಕಳೆದ 2023 ರಲ್ಲಿ ಈರನಗೌಡ ಪಾಟೀಲ್ ಮೇಲೆ ಹಲ್ಲೆ ಮಾಡಿದ್ದ ಸಾಗರ ಬೆಳ್ಳುಂಡಗಿ ಹಾಗೂ ಇಸಾಕ್ ಖರೇಷಿ
ಈರಣಗೌಡ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎಂಟು ತಿಂಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈರಣಗೌಡ ಸಹೋದರ ಮಲ್ಲನಗೌಡ ಆತನ ಮಕ್ಕಳು ಸಾಗರ ಹಾಗೂ ಇಸಾಕ್ ಕೊಲೆ ಮಾಡಿದ್ದಾರೆ. ಕಳೆದ ಅಕ್ಟೋಬರ್ 12 ರ ರಾತ್ರಿ ಕನ್ನೂರು ಗ್ರಾಮದಲ್ಲಿ ಕೊಲೆ ಮಾಡಿದ್ದರು. ಸಾಗರ ಹಾಗೂ ಇಸಾಕ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಇನ್ನೂ ನಾಲ್ವರು ಆರೋಪಿಗಳ ವಿಚಾರಣೆ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ತನಿಖೆ ಮುಂದುವರೆದಿದ್ದು, ತನಿಖೆ ಬಳಿಕ ಮತ್ತಷ್ಟು ಸತ್ಯಾಂಶ ಬಯಲಾಗೋ ಸಾಧ್ಯತೆ ಇದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ