Kittur

ಕೇವಲ ಕಿತ್ತೂರು ಉತ್ಸವ ಆಚರಿಸದೇ, ಕಿತ್ತೂರು ಅಭಿವೃದ್ಧಿಗೂ ಸ್ವಲ್ಪ ಯೋಚಿಸಿ….

Share

ಕಿತ್ತೂರು ಉತ್ಸವ ಆಚರಣೆಯೊಂದಿಗೆ ಅಭಿವೃದ್ಧಿಯನ್ನು ಕೈಗೊಳ್ಳಿ
ಅಭಿವೃದ್ಧಿಯ ವೇಳೆ ತಾಯಿ-ಮಗನನ್ನು ಅಗಲಿಸದಿರಿ…; ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ

ಕೇವಲ ಕಿತ್ತೂರು ಉತ್ಸವವನ್ನು ಆಚರಿಸದೇ ಚೆನ್ನಮ್ಮನ ನಾಡು ಕಿತ್ತೂರು ಅಭಿವೃದ್ಧಿಗೆ ಮುಂದಾದರೇ ಕಿತ್ತೂರು ಉತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ. ಅಭಿವೃದ್ಧಿಯ ವೇಳೆ ತಾಯಿ ಮತ್ತು ಮಗನನ್ನು ಅಗಲಿಸುವುದು ಸರಿಯಲ್ಲವೆಂದು ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಕಳವಳ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು ಕಿತ್ತೂರು ಉತ್ಸವ ದೇಶದ ಹೆಮ್ಮೆಯ ಉತ್ಸವವಾಗಿದ್ದು, ಇಡೀ ದೇಶದ ಗಮನ ಸೆಳೆಯುವಂತೆ ಆಚರಿಸಬೇಕು. ಸರ್ಕಾರ ಇತ್ತ ಹೆಚ್ಚಿನ ಗಮನ ಹರಿಸದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಇನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಕುರಿತು ಮಾತನಾಡಿದ ಅವರು ಯಾವುದೇ ಸರ್ಕಾರ ಬಂದರೂ ಕೇವಲ ಕಿತ್ತೂರು ಉತ್ಸವವನ್ನು ಆಚರಿಸುತ್ತವೆಯೇ ಹೊರತು ಕಿತ್ತೂರು ಅಭಿವೃದ್ಧಿಗಾಗಿ ಯೋಚಿಸುವುದಿಲ್ಲ. ಉತ್ಸವದೊಂದಿಗೆ ಅಭಿವೃದ್ಧಿ ಮಾಡಿದರೇ, ಇದಕ್ಕೊಂದು ಅರ್ಥ ಬರುತ್ತದೆ ಎಂದರು.

ಕೇವಲ ರಾಯಣ್ಣನ ಕ್ಷೇತ್ರ ಮತ್ತು ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ತಾರತಮ್ಯ ತೋರಿ ತಾಯಿ ಮತ್ತು ಮಗನನ್ನು ಅಗಲಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದ್ದು, ಇದು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮೂಲ ಕ್ಷೇತ್ರವನ್ನು ನಿರ್ಲಕ್ಷಿಸುವುದು ಸರಿಯಲ್ಲ. ತಾಯಿ ಮಗನನ್ನು ಅಗಲಿಸಲು ಜಾತಿ ಮಧ್ಯ ಬರುತ್ತಿದ್ದು, ಭವಿಷ್ಯದಲ್ಲಿ ಇತಿಹಾಸವನ್ನು ಮರೆ ಮಾಚುವಂತಿದೆ ಎಂದರು.

Tags:

error: Content is protected !!