ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಜೋಡೆತ್ತುಗಳು ವಿದ್ಯುತ್ ಶಾರ್ಟ್ ಸರ್ಕೀಟ್‌ಗೆ ಬಲಿಯಾಗಿವೆ ಘಟನೆ ಧಾರವಾಡದ ಶಿಬಾರಗಟ್ಟಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ವೈ-ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಶಿಬಾರಗಟ್ಟಿ ಗ್ರಾಮದ ರೈತ ಉಮೇಶ ಪಾಮೋಜಿ ಎಂಬ ರೈತ ಅಂದಾಜು 7ಲಕ್ಷ ಮೌಲ್ಯದ ಎರಡು ಷರತ್ತಿನ ಎತ್ತುಗಳನ್ನು ತಂದು ಸಾಕಿದ್ದರು. ಈ ಜೋಡೆತ್ತುಗಳು ಧಾರವಾಡ ಗ್ರಾಮೀಣ ಭಾಗ ಸೇರಿದಂತೆ ಜಿಲ್ಲೆಯ ಹೊರಗಡೆಯು ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದವು. ಈ ಜೋಡೆತ್ತುಗಳು ರೈತ ಉಮೇಶನ ಜೀವಾಳವೇ ಆಗಿದ್ದವು. ಭಾನುವಾರ ರಾತ್ರಿ ಮನೆಯ ಹತ್ತಿರವೇ ಇರುವ ಶೆಡ್‌ನಲ್ಲಿ ರೈತ ಉಮೇಶ ಈ ಎತ್ತುಗಳನ್ನು ಕಟ್ಟಿ ಬಂದಿದ್ದರು. ಆದರೆ, ತಡರಾತ್ರಿ ಶೆಡ್‌ನಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿ ಎರಡೂ ಜೋಡೆತ್ತುಗಳು ಸ್ಥಳದಲ್ಲೇ ಅಸುನೀಗಿದ್ದು, ಇದರಿಂದ ರೈತ ಉಮೇಶನಿಗೆ ಸಿಡಿಲು ಬಡಿದಂತಾಗಿದ್ದು ಅವರು ಎತ್ತುಗಳನ್ನು ಕಳೆದುಕೊಂಡು ಕಣ್ಣೀರಿ ಹಾಕಿದ ಪ್ರಸಂಗ ಕೂಡ ನಡೆದಿದೆ. ಇನ್ನೂ ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು, ಹೆಸ್ಕಾಂನ ಅಧಿಕಾರಿಗಳು ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದರು. ಗರಗ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.