Vijaypura

ದ್ವೇಷದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬರ್ಬರವಾಗಿ ಜೋಡಿ ಕೊ*ಲೆ

Share

ವಿಜಯಪುರ ಜಿಲ್ಲೆಯಲ್ಲಿ ಜೋಡಿ ಕೊಲೆ ನಡೆದಿದೆ. ಕಲ್ಲಿನಿಂದ ಜಜ್ಜಿ ಇಬ್ಬರ ಬರ್ಬರ ಹತ್ಯೆ ಮಾಡಲಾಗಿರುವ ಘಟನೆ ನಿನ್ನೆ ತಡರಾತ್ರಿ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ನಡೆದಿದೆ. ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖರೇಷಿ (24) ಎಂಬುವವರ ಕೊಲೆ ಮಾಡಲಾಗಿದೆ‌. ಅಪರಿಚಿತರಿಂದ ಈ ಕೃತ್ಯ ನಡೆದಿದೆ, ಹತ್ಯೆ ಬಳಿಕ ಹಂತಕರು ಪರಾರಿಯಾಗಿದ್ದಾರೆ. ಹಳೆಯ ವೈಷಮ್ಯದಿಂದ ಸಾಗರ್ ಹಾಗೂ ಇಸಾಕ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿರೋ ಶಂಕೆ ವ್ಯಕ್ತವಾಗಿದೆ. ಎರಡು ವರ್ಷಗಳ ಹಿಂದೆ ತಮ್ಮೂರಿನ ಈರನಗೌಡ ಮೇಲೆ ಇಸಾಕ್ ಖರೇಷಿ ಹಾಗೂ ಸಾಗರ ಎಂಬ ಕಿಡಿಗೇಡಿಗಳು ತೀವ್ರ ಹಲ್ಲೆ ಮಾಡಿದ್ದರು. ಈರನಗೌಡ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ಮೃತಪಟ್ಟಿದ್ದ‌. ಈ ದ್ವೇಷದ ಕಾರಣ ಇಬ್ಬರ ಕೊಲೆ ನಡೆದಿರೋ‌ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Tags:

error: Content is protected !!