Belagavi

ಸುಪ್ರೀಂ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನ… ಬೆಳಗಾವಿ ಛಲವಾದಿ ಮಹಾಸಭೆಯಿಂದ ಖಂಡನೆ

Share

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಬೆಳಗಾವಿಯ ಛಲವಾದಿ ಮಹಾಸಭಾಯೂ ಆಗ್ರಹಿಸಿದ್ದು, ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದೆ.

ಈ ಘಟನೆಯು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಮುಂದುವರಿದ ಭಾಗವಾಗಿದ್ದು, ದೇಶದ ನ್ಯಾಯಾಂಗದ ಗೌರವಕ್ಕೆ ಧಕ್ಕೆ ತಂದಿದೆ. ಬೌದ್ಧ ಧರ್ಮದ ಅನುಯಾಯಿಗಳೂ ಆಗಿರುವ ನ್ಯಾಯಮೂರ್ತಿ ಗವಾಯಿ ಅವರ ಮೇಲಿನ ಈ ಕೃತ್ಯವು ಭಾರತದ ಸರ್ವೋಚ್ಚ ನ್ಯಾಯಾಲಯದ ಮೇಲೆ ಮಾಡಿದ ಅವಮಾನದಂತಿದೆ. ಈ ನಡೆ ಕೇವಲ ವ್ಯಕ್ತಿಯ ಮೇಲಿನ ದಾಳಿಯಲ್ಲ, ಬದಲಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನ್ಯಾಯದ ತತ್ವಗಳ ಮೇಲಿನ ದಾಳಿಯಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷರಾದ ದುರ್ಗೇಶ ಮೇತ್ರಿ ಹೇಳಿದ್ದಾರೆ. ವಕೀಲರೇ ಈ ಕೃತ್ಯವನ್ನು ಎಸಗಿರುವುದು ದುರಂತ. ಇಂತಹ ನಡೆ ವಕೀಲ ವೃತ್ತಿಗೂ ಕಳಂಕ ತಂದಿದ್ದು, ನ್ಯಾಯವಾದಿಗಳ ಗೌರವವನ್ನು ಹಾಳು ಮಾಡಿದೆ. ಇಂತಹ ಘಟನೆಗಳಿಗೆ ಕಠಿಣ ದಂಡನೆ ಮೂಲಕ ಕಡಿವಾಣ ಹಾಕದಿದ್ದರೆ, ಮುಂದೆ ರಾಷ್ಟ್ರಪತಿಗಳು, ಪ್ರಧಾನಿಗಳ ಮೇಲೆಯೂ ದಾಳಿ ನಡೆಯುವ ಪರಿಸ್ಥಿತಿ ಬರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಭರಮಾ ನಿಂಬಾವಳೆ, ಕೃಷ್ಣಾ ಕಾಂಬಳೆ, ಗುಣವಂ ಮದಾಳೆ, ಕುಮಾರ ದರಬಾರೆ, ಶಂಕರ್ ನಡೋಣಿ, ಉಮಾಜೀ ನಡೋಣಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!