ರಾಜಕೀಯದಲ್ಲಿ ತಮ್ಮ ಮಗನಿಗೆ ಭವಿಷ್ಯ ಇಲ್ಲ ಎಂದು, ತಮ್ಮ ಮೊಮ್ಮಕ್ಕಳನ್ನು ಇದೀಗ ಸಿದ್ದರಾಮಯ್ಯ ಮುನ್ನೆಲೆಗೆ ತರುತ್ತಿದ್ದಾರೆ. ಅವರಿಗಾಗಿ ದುಡ್ಡು ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.
-ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅಭಿವೃದ್ಧಿ ಆಗ್ತಿಲ್ಲ, ಆಡಳಿತ ಸುಧಾರಣೆ ಇಲ್ಲ. ಸರ್ಕಾತ ಬಂದ ಮೇಲೆ ಸರ್ಕಾರಿ ಅಧಿಕಾರಿಗಳಿಗೆ ಇವರು ಆತ್ಮಹತ್ಯೆ ಭಾಗ್ಯ ಕೊಟ್ಟಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಒಬ್ಬ ಅಧಿಕಾರಿಯನ್ನು ಇವರು ಬಲಿ ಪಡೆದರು. ಎಸ್‌ಟಿ ಸಮಾಜದ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಸರ್ಕಾರಿ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯವನ್ನೆ ಈ ಸರ್ಕಾರ ತಂದು ಕೊಟ್ಟಿಚೆ ಎಂದು ಬೆಲ್ಲದ ವಾಗ್ದಾಳಿ ನಡೆಸಿದರು. ಜತೆಗೆ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಪಿಎ ಹೆಸರು ಬರೆದಿಟ್ಟು ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಕಲಬುರ್ಗಿ ಮಳಖೇಡ ಗ್ರಾಮದಲ್ಲಿ ಭಾಗ್ಯವತಿ ಎಂಬುವವರು ವೇತನ ಬಂದಿಲ್ಲ ಎಂದು ಆತ್ಮಹತ್ಯೆ
ಮಾಡಿಕೊಂಡಿದ್ದಾರೆ. ನಾಲ್ಕು ತಿಂಗಳಿಂದ ಇವರಿಗೆ ವೇತನವಾಗಿರಲಿಲ್ಲ. ಸರ್ಕಾರಕ್ಕೆ ಮೊರೆ ಇಟ್ಟರೂ ಆ ಮಹಿಳೆಗೆ ವೇತನ ಸಿಕ್ಕಿಲ್ಲ. ಇದರಿಂದ ಆಕರ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂತಹ ಘಟನೆಗಳು ಸರ್ಕಾರಕ್ಕೆ ನಾಚಿಕೆ ಬರುವ ಸಂಗತಿಗಳು. ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ಕಡಿಮೆ ಮಾಡೋದು ಬಿಟ್ಟು ಇಂತಹ ಆತ್ಮಹತ್ಯೆ ಭಾಗ್ಯ ಕೊಡುತ್ತಿದ್ದಾರೆ. ಇವರು ರೈತರ ಪರ, ಬಡವರ ಪರ ಕೆಲಸ ಮಾಡುತ್ತಿಲ್ಲ. ಕಲಬುರಗಿಯಿಂದ
ಮೈಸೂರುವರೆಗೂ ಬೆಳೆಹಾನಿ ನೀಡಿಲ್ಲ. ದಿನಾಲೂ ಕೈ ಸರ್ಕಾರ, ಬರೀ ಜಾತಿ, ಧರ್ಮ, ಆರ್‌ಎಸ್‌ಎಸ್ ಬ್ಯಾನ್ ಇಂತವುಗಳನ್ನೇ ಚರ್ಚೆ ಮಾಡುತ್ತಿದೆ. ಸಿಎಂ ಅವರಿಗೆ ತಮ್ಮ ಖುರ್ಚಿ ಉಳಿಸಿಕೊಳ್ಳುವುದೇ ಕೆಲಸವಾಗಿದೆ. ಸಿಎಂ ತಮ್ಮ ಮೊಮ್ಮಕ್ಕಳಿಗೆ ಹಣ ಮಾಡಬೇಕಿದೆ. ಸಿದ್ದರಾಮಯ್ಯ ಅಲ್ಟ್ರಾ ಎಡಪಂತೀಯರು, ಆರ್‌ಎಸ್‌ಎಸ್ ಏನು ಕೆಲಸ ಮಾಡುತ್ತಿದೆ ಎಂಬುದು ಅವರಿಗೆ ಗೊತ್ತಿರಲಿ. ಅದರ ಕಾರ್ಯವ್ಯಾಪ್ತಿ ಏನು ಎಂಬುದನ್ನೂ ಅವರು ತಿಳಿಯಬೇಕು. ಸಂಘದ ಮೂಲ ಉದ್ದೇಶ ಏನು ಎಂಬುದನ್ನು ಇವರು ಮೊದಲು ಅರ್ಥ ಮಾಡಿಕೊಳ್ಳಲಿ ಎಂದರು. ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಬರುತ್ತಿವೆ ಎಂಬ ವಿಚಾರಕ್ಕೆ
ಪ್ರತಿಕ್ರಿಯಿಸಿದ ಬೆಲ್ಲದ, ಪ್ರಚಾರಕ್ಕೆ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ. ಅವರದ್ದೇ ಸರ್ಕಾತರ ಇದೆ ಕಾಲ್ ಡಿಟೆಲ್ಸ್ ತೆಗೆಯಲಿ. ತನಿಖೆ ಮಾಡಿ ಕ್ರಮ ಕೈಗೊಳ್ಳಲಿ. ಇವರು ಪ್ರಚಾರಕ್ಕೋಸ್ಕರ ಏನೇನೋ ಹೇಳುತ್ತಾರೆ ಎಂದು ತಿಳಿಸಿದರು.
ಬೈಟ್ ಅರವಿಂದ ಬೆಲ್ಲದ, ವಿಪಕ್ಷ ಉಪನಾಯಕ