BELAGAVI

ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣ ಬೇಧಿಸಿದ ಬೆಳಗಾವಿ ಪೊಲೀಸರು…ಕೊನೆಗೂ ಆರೋಪಿ ಅರೆಸ್ಟ್

Share

ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ, ಮದ್ಯದ ನಶೆಯಲ್ಲಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಹಾದೇವ ಭೀಮಪ್ಪಾ ಜೋಗಿ (58), ಕಾರ್ಲಕಟ್ಟಿ, ಸವದತ್ತಿ ಮೂಲದವರಾಗಿದ್ದು, ಬೆಳಗಾವಿಯ ಶ್ರೀನಗರದಲ್ಲಿ ವಾಸವಾಗಿದ್ದರು. ಇವರು ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಶಿವಬಸವ ನಗರದಲ್ಲಿರುವ ಎಸ್.ಜಿ.ಬಿ.ಐ.ಟಿ ಕಾಲೇಜು ಎದುರಿನ ಕ್ವಾರ್ಟರ್ಸ್‌ನಲ್ಲಿ ಅವರ ತಲೆಗೆ ಮತ್ತು ಎದೆಗೆ ಹರಿತವಾದ ಆಯುಧದಿಂದ ಗಾಯಗೊಳಿಸಿ ಕೊಲೆ ಮಾಡಲಾಗಿತ್ತು. ಮೃತರ ಮಗನಾದ ಬಸವರಾಜ ಮಹಾದೇವ ಜೋಗಿ ಅವರು ನೀಡಿದ ದೂರಿನ ಮೇರೆಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬೆಳಗಾವಿ ಎಸಿಪಿ, ಮಾರ್ಕೆಟ್ ಉಪ-ವಿಭಾಗದ. ಸಂತೋಷ ಸತ್ಯನಾಯಿಕರವರ ಮಾರ್ಗದರ್ಶನದಲ್ಲಿ, ಸಂಶಯಾಸ್ಪದ ಆರೋಪಿಯಾದ ಆಕಾಶ ಈರಪ್ಪಾ ನಿಪ್ಪಾಣಿಕರ (28)ನನ್ನು ಕೂಲಂಕುಷವಾಗಿ ವಿಚಾರಣೆ ನಡೆಸಲಾಯಿತು. ಈ ವೇಳೆ ಆರೋಪಿಯು ಮದ್ಯಪಾನದ ನಶೆಯಲ್ಲಿ, ಸಣ್ಣ ವಿಷಯಕ್ಕೆ ಜಗಳವಾಡಿ ಹರಿತವಾದ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೂಡಲೇ ಆರೋಪಿಯನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆಯನ್ನು ಮುಂದುವರಿಸಲಾಗಿದೆ.
ಆರೋಪಿ ಪತ್ತೆ ಮಾಡುವಲ್ಲಿ ಶ್ರಮಿಸಿದ ಪಿಐ. ಜೆ.ಎಮ್.ಕಾಲಿಮಿರ್ಚಿ, ಪಿಎಸ್‌ಐಗಳಾದ ಹೊನ್ನಪ್ಪ ತಳವಾರ,. ಉದಯ ಪಾಟೀಲ, ಪಿ. ಎಮ್. ಮೋಹಿತೆ, ಹಾಗೂ ಸಿಬ್ಬಂದಿ ವರ್ಗದವರಾದ ಬಿ. ಎಫ್. ಬಸ್ತವಾಡ ಎಎಸ್‌ಐ,. ಅರುಣ ಕಾಂಬಳೆ, ಕೆ. ಬಿ. ಗೌರಾಣಿ, ಸಿ. ಐ. ಚಿಗರಿ, ಮಹೇಶ ಒಡೆಯರ, ಮಲ್ಲಿಕಾರ್ಜುನ ಗಾಡವಿ ಅವರ ಕಾರ್ಯವನ್ನು ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ರವರು ಶ್ಲಾಘಿಸಿದ್ದಾರೆ..

Tags:

error: Content is protected !!