
ನಾಳೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಳಗಾವಿ ಜಿಲ್ಲಾಡಳಿತವು ಮಹಾರಾಷ್ಟ್ರದ ಸಂಸದ ಧೈರ್ಯಶೀಲ್ ಮಾನೆ ಸೇರಿದಂತೆ ಹಲವರಿಗೆ ಜಿಲ್ಲಾ ಪ್ರವೇಶ ನಿರ್ಬಂಧವನ್ನು ವಿಧಿಸಿದೆ.
ನಾಳೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಳಗಾವಿ ಜಿಲ್ಲಾಡಳಿತವು ಕರಾಳ ದಿನಕ್ಕೆ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ, ಕೊಲ್ಹಾಪುರ ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಘಟಕದ ಜಿಲ್ಲಾಧ್ಯಕ್ಷ ವಿಜಯ ದೇವಣೆ, ಕೊಲ್ಹಾಪುರ ಶಿವಸೇನೆಯ ಉಪಾದ್ಯಕ್ಷ ಸಂಜಯ್ ಪೋವಾರ್, ಶಿವಸೇನಾ ಕೊಲ್ಹಾಪೂರ ಗ್ರಾಮೀಣ ಪ್ರಮುಖರಾದ ಸುನೀಲ ಶಿಂತ್ರೆ, ಕೊಲ್ಹಾಪೂರ ನಗರ ಪ್ರಮುಖರಾದ ಸುನೀಲ್ ಮೋದಿ ಸೇರಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯ ಬೆಂಬಲಿಗರು ಬೆಳಗಾವಿ ನಗರವನ್ನು ಪ್ರವೇಶಿಸದಂತೆ ಬೆಳಗಾವಿ ಜಿಲ್ಲಾಡಳಿತವು ನಿರ್ಬಂಧವನ್ನು ಹೇರಿದೆ.

 
			 
 
 
  
					 
				 
						  
						  
						  
						 
						 
						