ಡಿಸಿಸಿ ಬ್ಯಾಂಕಿನ ಚುನಾವಣಾ ಕಣದಿಂದ ಶಾಸಕ ಅಶೋಕ್ ಪಟ್ಟಣ್ ಹಿಂದಕ್ಕೆ ಸರಿದಿದ್ದು, ತೀವ್ರ ಕುತೂಹಲವನ್ನು ಮೂಡಿಸಿದೆ.
ಇಂದು ಡಿಸಿಸಿ ಬ್ಯಾಂಕಿನ ಚುನಾವಣೆಯ ನಾಮಪತ್ರ ಮರಳಿ ಪಡೆಯುವ ಕೊನೆಯ ದಿನವಾಗಿತ್ತು. ಈ ವೇಳೆ ಶಾಸಕ ಅಶೋಕ್ ಪಟ್ಟಣ್ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದರು.
ನಾಮಪತ್ರ ಹಿಂದಕ್ಕೆ ಪಡೆಯಲು ಬೇರೆ ಯಾವುದೇ ವಿಶೇಷ ಕಾರಣವಿಲ್ಲ. ಯಾರಿಗೆ ಬೆಂಬಲ ಸೂಚಿಸುತ್ತೇವೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ಉಸ್ತುವಾರಿ ಸಚಿವರನ್ನು ಈ ವಿಷಯವಾಗಿ ಅಲ್ಲ. ಬೇರೆಯ ವಿಷಯವಾಗಿ ಭೇಟಿಯಾಗಿದ್ದೇವು. ನಮಗೆ ಸೋಲಿನ ಭೀತಿಯಿಲ್ಲ. ರಾಜಕೀಯದಲ್ಲಿ ಸಾಕಷ್ಟು ಕಾರಣಗಳಿರುತ್ತವೆ. ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ಹಾಗೆಯೇ ತಿಳಿದುಕೊಳ್ಳಿ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ಸಿಗದೇ ಇರಬಹುದು. ಎಂದರು.
ಇನ್ನು ಸಂಪುಟ ವಿಸ್ತರಣೆ ಸಿಎಂ ಗೆ ಬಿಟ್ಟ ವಿಚಾರ. ಮೊದಲು ಸಚಿವ ಸ್ಥಾನ ನೀಡಲಿ. ನಂತರ ಖಾತೆಯ ಬಗ್ಗೆ ವಿಚಾರ ಮಾಡೋಣ. ಈ ಬಾರಿ ಶೇ. 99 ರಷ್ಟು ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಆಸೆಯಿದೆ. ಮೊನ್ನೆಯೂ ಹೇಳಿದ್ದೇ ಇಂದು ಹೇಳುತ್ತೇನೆ. ನನ್ನದು ಯಾವುದೇ ಪೇನಲ್ ಅಲ್ಲ. ನಮ್ಮದು ಸಿದ್ಧರಾಮಯ್ಯ ಟೀಂ ಎಂದರು.