Dharwad

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100ನೇ ವರ್ಷದ ಸಂಭ್ರಮ & ವಿಜಯ ದಶಮಿ ಹಿನ್ನೆಲೆ….

Share

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈಗ 100 ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಹೀಗಾಗಿ ದೇಶದಾದ್ಯಂತ ಆರ್‌ಎಸ್‌ಎಸ್‌ನಿಂದ ಬೃಹತ್ ಪಥ ಸಂಚಲನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲೂ ಆರ್‌ಎಸ್‌ಎಸ್‌ನಿಂದ ಆಕರ್ಷಕ ಬೃಹತ್ ಪಥ ಸಂಚಲನ ಯಶಸ್ವಿಯಾಗಿ ನಡೆಯಿತು.

ಧಾರವಾಡದ ಕೆ.ಇ.ಬೋರ್ಡ್ ಕಾಲೇಜು ಆವರಣದಲ್ಲಿ ಜಮಾಯಿಸಿದ ಸುಮಾರು 5 ಸಾವಿರಕ್ಕೂ ಅಧಿಕ ಜನ ಗಣವೇಷಧಾರಿಗಳು, ಮೈದಾನದಿಂದ ಎರಡು ತಂಡಗಳಾಗಿ ಪಥ ಸಂಚಲನ ನಡೆಸಿದರು. ಕೆ.ಇ.ಬೋರ್ಡ್ ಕಾಲೇಜು ಮೈದಾನದಿಂದ ಆರಂಭವಾದ ಈ ಪಥಸಂಚಲನ, ಧಾರವಾಡದ ಪ್ರಮುಖ ರಸ್ತೆಗಳ ಮೂಲಕ ಹಾದು ಧಾರವಾಡದ ಕೆಸಿಡಿ ಮೈದಾನಕ್ಕೆ ಬಂದು ಮುಕ್ತಾಯವಾಯಿತು. ಪಥ ಸಂಚಲನದುದ್ದಕ್ಕೂ ದೇಶಭಕ್ತಿ ಘೋಷಣೆಗಳು ಮೊಳಗಿದವು. ಪಥಸಂಚಲನ ಸಾಗುವ ದಾರಿಯಲ್ಲಿ ಅನೇಕರು ರಂಗೋಲಿ ಬಿಡಿಸಿ, ಅಲ್ಲಲ್ಲಿ ಭಾರತಮಾತೆಯ ಭಾವಚಿತ್ರಗಳನ್ನೂ ಹಾಕಿದ್ದರು. ಪಥ ಸಂಚಲನದ ಗಣವೇಷಧಾರಿಗಳ ಮೇಲೆ ರಸ್ತೆ ಪಕ್ಕ ನಿಂತಿದ್ದ ಅನೇಕರು ಪುಷ್ಪಗಳನ್ನು ಹಾಕಿ ಸ್ವಾಗತಿಸಿದರು‌. ಇನ್ನೂ ಪಥ ಸಂಚಲನದಲ್ಲಿ ಚಿಕ್ಕಮಕ್ಕಳು ನೆಡೆ ಗಮನಸೆಳೆಯಿತು. ಪಥ ಸಂಚಲನದ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ನೇತೃತ್ವದಲ್ಲಿ, ಪಥಸಂಚಲನ ಸಾಗುವ ಮಾರ್ಗದ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೈಗೊಳ್ಳಲಾಯಿತು. ‌

Tags:

error: Content is protected !!