ಗಣೇಶ ಮೂರ್ತಿ ವೀಕ್ಷಣೆ ಮಾಡಿ ಬರುತ್ತೇವೆಂದು ಮನೆಯಲ್ಲಿ ಹೇಳಿ ಹೋಗಿದ್ದ ಇಬ್ಬರು ಬಾಲಕರು ಶುಕ್ರವಾರ ಕಾಣೆಯಾಗಿದ್ದರು. ಕಾಣೆಯಾಗಿದ್ದ ಇಬ್ಬರು ಬಾಲಕರು ಶನಿವಾರ ಪತ್ತೆಯಾದ ಘಟನೆ ನಡೆದಿದೆ.

ಬೆಳಗಾವಿಯ ಅನಗೋಳದ ಶಿವಶಕ್ತಿ ನಗರದಲ್ಲಿ ವಾಸವಿರುವ ಅನಮೂಲ ಶಂಕರ ಪರಿಯಾರ 10 ವರ್ಷ ಹಾಗೂ ಕಾರ್ತಿಕ ಅರ್ಜುನ ಪರಿಯಾರ 8 ವರ್ಷದ ಇಬ್ಬರು ಅಪ್ರಾಪ್ತ ಬಾಲಕರು ಶುಕ್ರವಾರ ಗಣೇಶ ಮೂರ್ತಿ ವೀಕ್ಷಣೆ ಮಾಡಿ ಬರುತ್ತೇವೆಂದು ಮನೆಯಲ್ಲಿ ಹೇಳಿ ಹೋಗಿ ಕಾಣೆಯಾದ ಬಗ್ಗೆ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಬಾಲಕರ ಪತ್ತೆಗೆ ತಂಡವನ್ನು ರಚಿಸಿದರು. ಮೊದಲ ರೈಲ್ವೇ ಗೇಟ್ ಬಳಿ ಚೇತನ ಶಿವಪ್ಪಾ ಕೊಮನ್ನವರ ಎಂಬ ಬಾಲಕ ಸಹಾಯದಿಂದ ಶನಿವಾರ ಮೊದಲ ರೈಲ್ವೇ ಗೇಟ್ ಬಳಿ ಗಣೇಶ ಮಂಡಳದ ಬಂದೋಬಸ್ತ ಹೋಮಗಾರ್ಡ್ ಮಾಯಪ್ಪಾ ಸನದಿ ಪತ್ತೆ ಮಾಡಿರುವ ಘಟನೆ ನಡೆದಿದೆ.