ಬಸವಣ್ಣ ಅವರ ಹೆಸರು ಇಟ್ಟು ಸಮಾಜ ಒಡೆಯುವ ಕೆಲಸ ಆಗ್ತಾ ಇದೆ. ಪ್ರತ್ಯೇಕ ಲಿಂಗಾಯತ ಅನ್ನೋದು ಯಾವತ್ತೂ ಆಗಬಾರದು.
ಆದ್ದರಿಂದ ಇದೆ ತಿಂಗಳ 19 ರಂದು ಬೃಹತ್ ಜಾಗೃತಿ ಸಮಾವೇಶ ಮಾಡಲಿದ್ದೇವೆ ಎಂದು ಶಿರಹಟ್ಟಿ ಭಾವೈಕ್ಯತೆ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು.ಸರ್ಕಾರ ಜನಗಣತಿ ಮಾಡುವ ನಿರ್ಣಯಕ್ಕೆ ಬಂದಿದೆ. ಈ ಹಿಂದೆ ಮಾಡಿದ ಜನಗಣತಿಗೆ ವಿರೋಧ ಹಿನ್ನೆಲೆ ಇನ್ನೊಮ್ಮೆ ಮಾಡ್ತಾ ಇದ್ದಾರೆ. ನೆನ್ನೆ ನಾವು ಈ ಬಗ್ಗೆ ಶಿವಯೋಗ ಮಂದಿರದಲ್ಲಿ ಚರ್ಚೆ ಸಹ ಮಾಡಿದ್ದೇವೆ. ನಮ್ಮ ನಿಲುವು ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲಾ ಅನ್ನೋದು ನಾವೆಲ್ಲರೂ ಒಂದೇ.
ಕೆಲವರು ಇಂತಹ ವಾದ ಮಾಡಿ ಸಮಾಜ ಇಬ್ಬಾಗ ಮಾಡ್ತಾ ಇದ್ದಾರೆ. ನಾವೆಲ್ಲಾ ಇದನ್ನ ಖಂಡಿಸುತ್ತೇವೆ.
ಎಂದರು. 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಿಂದೆ ಇದ್ದಂತೆ ಮುಂದಿನ ನಿಲುವು ಇರುತ್ತೆ. 2017-18 ರಲ್ಲಿ ಪ್ರತ್ಯಕಕ್ಕಾಗಿ ಹೋರಾಟ ಆಗಿದ್ದವು, ಅದನ್ನ ಖಂಡಿಸುತ್ತೆವೆ. ಇದು ತತ್ವ ಪ್ರಧಾನ ಧರ್ಮ, ವ್ಯಕ್ತಿ ಪ್ರಧಾನ ಅಲ್ಲಾ
ವೈದಿಕ ಪಾಠ ಶಾಲೆ ನಡೆಸುವವರೇ ಅದರ ವಿರೋಧಿ ಗುಂಪಿನಲ್ಲಿದ್ದಾರೆ.ಅವರ ನಡೆಗೆ ಅವರು ವಿರುದ್ಧವಾಗಿದ್ದಾರೆ. ಇದೆ ತಿಂಗಳ 19 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಸಮಾವೇಶ ನಡೆಸಲಿದ್ದೇವೆ ಅಂದು ನೂರಾರು ಸ್ವಾಮಿಗಳು, ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.
ನಮ್ಮ ನಿಲುವು ಹಾಗೂ ಸಮಾಜದಲ್ಲಿನ ಗೊಂದಲವನ್ನು ನಿವಾರಿಸುವುದೇ ಸಮಾವೇಶದ ಮೂಲ ಉದ್ದೇಶ.
ಇವತ್ತಿನ ಕಾಲದಲ್ಲಿ ಬಸವಣ್ಣ ಅವರು ಇದ್ದಿದ್ರೆ ಓಡಾಡಿಸಿ ಒದಿತಾ ಇದ್ರು
ಬಸವ ಸಂಸ್ಕೃತಿ ಯಾತ್ರೆಯನ್ನ ಕಾವಿ ರಾಜಕಾರಣಿಗಳ ನೇತೃತ್ವ ವಹಿಸಿಕೊಂಡಿದೆ.
ಬಸವ ಸಂಸ್ಕೃತಿ ಯಾತ್ರೆಯಲ್ಲಿ ತಪ್ಪಾದ ಸಂದೇಶ ನೀಡ್ತಾ ಇದ್ದಾರೆ. ಬಾಗೇವಾಡಿಯಲ್ಲಿ ನಡೆದ ಯಾತ್ರೆಯಲ್ಲಿ ಲಿಂಗಾಯತ ಬಿಟ್ಟು ಬಸವ ಧರ್ಮ ಮಾಡ್ತೇವೆ ಅಂತಾರೆ.ಅವರಲ್ಲಿ ಬದ್ಧತೆ ಕೊರತೆ ಇದೆ
ಸಮಾಜ ಒಡೆಯುವ ಗುರಿ ಅವರದ್ದಾಗಿದೆ
ನಮ್ಮದು ಬಸವ ಸಂಸ್ಕೃತಿ, ಮಠ ಸಂಸ್ಕೃತಿ ಅಲ್ಲಾ ಅಂತಾರೆ. ನೀವು ಬೆಂಲಿಸುವವರು ಮಠಾಧಿಪತಿಗಳಿದ್ದಾರೆ. ವೈದಿಕ ಪಾಠ ಶಾಲೆ ನಡೆಸಿ ವೈದಿಕ ಸಂಸ್ಕೃತಿ ವಿರೋಧ ಮಾಡ್ತಾರೆ.
ಸಮಾಜ ದುರ್ಬಲ ಮಾಡುವ ಕೆಲಸ ಮಾಡ್ತಾ ಇದ್ದಾರೆ. ವೀರಶೈವ ಲಿಂಗಾಯತ ಒಂದೇ ಅನ್ನೋ ಮಾಠಾಧಿಪತಿಗಳೆಲ್ಲ ಬರಬೇಕು. ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಒಂದಾದರೆ ಗಟ್ಟಿ ಆಗುತ್ತೆ ಅಂತಾ ಒಡೆಯುವ ಕೆಲಸ ಮಾಡ್ತಾ ಇದ್ದಾರೆ.
ಬಹು ಸಂಖ್ಯಾತ ಮಠಾಧೀಶರು ಬರ್ತಾರೆ.
ರಾಜ್ಯದ ಚುನಾಯಿತ ಪ್ರತಿನಿಧಿಗಳು, ಮಾಜಿ ಶಾಸಕರು ಬರ್ತಾರೆ..ಇದು ಶಕ್ತಿ ಪ್ರದರ್ಶನ ಅಲ್ಲಾ, ಉಳಿವಿನ ಪ್ರದರ್ಶನ ಇದು ವೀರಶೈವ ಲಿಂಗಾಯತರ ಏಕತಾ ಸಮಾವೇಶ
ನಾವು ಪ್ರತ್ಯೇಕ ಮಾಡಲು ಹೊರಟವರಲ್ಲ. ಜನರ ಗೊಂದಲ ನಿವಾರಣೆ ಮಾಡೋದೇ ನಮ್ಮ ಗುರಿ.
ಅವರು ಬರುವ ಮನಸ್ಥಿತಿ ಇಲ್ಲಾ, ಒಡೆಯುವ ಮನಸ್ಥಿತಿಯಲ್ಲಿದ್ದಾರೆ. ಹಿಂದೆ ಅವರು ಹೋರಾಟ ಮಾಡುವಾಗ ಯಾವ ಸರ್ಕಾರ ಇತ್ತು, ಈಗ ಯಾವುದಿದೆ ಅನ್ನೋದೇ ಪ್ರಶ್ನೆ. ಪಲ್ಲಕ್ಕಿ ಉತ್ಸವ ಬೇಡ ಅಂದಿದ್ದಕ್ಕೆ ರಥದಲ್ಲಿ ಉತ್ಸವ ಮಾಡ್ತಾ ಇದ್ದಾರೆ ಎಂದರು.