ಶ್ರೀ ೧೦೦೮ ಧರ್ಮನಾಥ ದಿಗಂಬರ್ ಜೈನ ಮಂದಿರದ ವತಿಯಿಂದ ಷೋಡಷಕರಣ ಭಾವನಾ ಮತ್ತು ದಶಲಕ್ಷಣ ಮಹಾಪರ್ವ ಮಹೋತ್ಸವವನ್ನು ಆಯೋಜಿಸಲಾಗಿದೆ.

ಬೆಳಗಾವಿಯ ಧರ್ಮನಾಥ ಭವನದಲ್ಲಿ ದಕ್ಷಿಣ ಭಾರತ ಜೈನ ಸಭಾ ಮಾಣಿಕಬಾಗ್ ದಿಗಂಬರ್ ಜೈನ ಬೋರ್ಡಿಂಗ್’ನ ವತಿಯಿಂದ ಶ್ರೀ ೧೦೦೮ ಧರ್ಮನಾಥ ದಿಗಂಬರ್ ಜೈನ ಮಂದಿರದ ವತಿಯಿಂದ ಷೋಡಷಕರಣ ಭಾವನಾ ಮತ್ತು ದಶಲಕ್ಷಣ ಮಹಾಪರ್ವ ಮಹೋತ್ಸವವನ್ನು ಆಯೋಜಿಸಲಾಗಿದೆ.
ಕಳೆದ ೨೫ ವರ್ಷಗಳಿಂದ ಷೋಡಶಕರಣ ಭಾವನಾ ಮತ್ತು ದಶಲಕ್ಷಣ ಪರ್ವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಒಂಬತ್ತನೇಯ ದಿನ ಬ್ರಹ್ಮಚರ್ಯ ವ್ರತದ ಆಚರಣೆ ಮಾಡಲಾಗುತ್ತದೆ. ಷೋಡಶಕರಣ ಭಾವನಾ ಎಂದರೇ ೧೬ ಭಾವನೆಗಳನ್ನು ಧಾರಣೆ ಮಾಡಲಾಗುತ್ತದೆ. ಇಂದು ಪರಿಹಾರ ಶುದ್ಧ ಭಾವನೆಯನ್ನು ಶನಿವಾರದಂದು ಆಚರಿಸಲಾಗುತ್ತಿದೆ. ಒಟ್ಟು ೩೫ ಜನ ನೋಂಪಿಯಾದವರು ಭಾಗಿಯಾಗಿದ್ದಾರೆ ಎಂದು ಡಾ. ನಾಗರಾಜ್ ಮರೆಣ್ಣವರ್ ಹೇಳಿದರು.