Uncategorized

ರಾಜಣ್ಣ ಒಬ್ಬಂಟಿಯಲ್ಲ…ಅವರೊಂದಿಗೆ ಕಾಂಗ್ರೆಸ್ ಪಕ್ಷವಿದೆ…

Share

ಮಾಜಿ ಸಚಿವ ರಾಜಣ್ಣ ಕಾಂಗ್ರೆಸ್ ಬಿಡಲ್ಲ. ಅವರು ಒಬ್ಬಂಟಿಯಾಗಿಯೂ ಇಲ್ಲ. ಅವರೊಂದಿಗೆ ಕಾಂಗ್ರೆಸ್ ಪಕ್ಷವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಕೇಂದ್ರ ಸರ್ಕಾರದ ಜಿಎಸ್ಟಿ ಕಡಿತ ನಿರ್ಧಾರವನ್ನು ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ ಸ್ವಾಗತಿಸಿದ್ದಾರೆ. ಅದೇ ರೀತಿ, ಕರ್ನಾಟಕಕ್ಕೆ 70,000 ಕೋಟಿ ರೂಪಾಯಿಗಳಷ್ಟು ನಷ್ಟವಾಗಬಹುದು ಎಂಬ ಆತಂಕದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ಅಗತ್ಯ ವಸ್ತುಗಳಿಗೆ 0% ಅಥವಾ 5% ಜಿಎಸ್ಟಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕೆಲವು ವಸ್ತುಗಳ ಮೇಲಿನ ಜಿಎಸ್ಟಿ ದರಗಳು ಇನ್ನೂ ಹೆಚ್ಚೇ ಇವೆ ಎಂದಿದ್ದಾರೆ.

ಇನ್ನು, ಸಿದ್ಧರಾಮಯ್ಯ ಕಾಂಗ್ರೆಸ್ಸಿನಲ್ಲಿರುವವರೆಗೂ ಕಾಂಗ್ರೆಸ್ ಬಿಡಲ್ಲ ಎಂದ ಮಾಜಿ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಣ್ಣ ಎಂದಿಗೂ ಕಾಂಗ್ರೆಸ್ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಇವೆಲ್ಲ ಅನಾವಶ್ಯಕವಾಗಿ ಚರ್ಚೆ ಮಾಡುವುದು ಸರಿಯಲ್ಲ. ಬಿಜೆಪಿಗರ ಆರೋಪಗಳಿಗೆ ತಿರುಗೇಟು ನೀಡಿದ ಅವರು, ರಾಜಣ್ಣ ಈಗ ಕಾಂಗ್ರೆಸ್ ಬಿಡಲ್ಲ ಎಂದರು. ಅವರೊಂದಿಗೆ ಕಾಂಗ್ರೆಸ್ ಪಕ್ಷವಿದೆ. ಅವರು ಒಬ್ಬಂಟಿಯಾಗಲ್ಲ ಎಂದರು

Tags:

error: Content is protected !!