ಬೆಳಗಾವಿ: ಬೆಳಗಾವಿಯ ರಿದ್ಧಿ ವಿಜ್ಹನ್’ನ ಸಂಚಾಲಕಿ ದಿವಂಗತ ನಿಶಾ ಛಾಬ್ರಿಯಾ ಅವರ ದ್ವಿತೀಯ ಪುಣ್ಯ ಸ್ಮರಣೆಯನ್ನು ವಿವಿಧ ಸಾಮಾಜೀಕ ಉಪಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬೆಳಗಾವಿಯ ರಿದ್ಧಿ ವಿಜ್ಹನ್’ನ ಸಂಚಾಲಕಿ ದಿವಂಗತ ನಿಶಾ ಛಾಬ್ರಿಯಾ ಅವರ ದ್ವಿತೀಯ ಪುಣ್ಯ ಸ್ಮರಣೆ ನಿಮಿತ್ಯ ಸುಶೀಲಾ ನಾರಾಯಣ ಛಾಬ್ರಿಯಾ ಫೌಂಡೇಶನ್ ಮತ್ತು ವಿಶ್ವ ಸಿಂಧಿ ಸೇವಾ ಸಂಗಮ ಮತ್ತು ಲಾಯನ್ಸ್ ಕ್ಲಬ್ ಆಫ್ ಮುಂಬೈ ಲಾಯನ್ಸ್’ನ ಸಹಯೋಗದಲ್ಲಿ ಗೌರಿ ಛಾಬ್ರಿಯಾ ಅವರ ನೇತೃತ್ವದಲ್ಲಿ ಈ ಉಪಕ್ರಮ ನಡೆಯಿತು. ಬೆಳಗಾವಿಯ ಪೂನಂ ನಗರದಲ್ಲಿರುವ ಬಿಎಂಸಿಯ ಎಂಪಿಎಸ್ ಸಿ ಬಿ ಎಸ್ ಇ ಶಾಲೆಯಲ್ಲಿ ಶಿಕ್ಷಕರ ದಿನದ ಹಿನ್ನೆಲೆ ಪ್ರಾಂಶುಪಾಲರು ಸೇರಿದಂತೆ 27 ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಲ್ಲದೇ 201 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಸ್ತುಗಳ ಮತ್ತು ಉಪಹಾರ ವಿತರಣೆಯನ್ನು ಮಾಡಲಾಯಿತು.
ನಿಶಾ ಛಾಬ್ರಿಯಾ ಅವರ ದ್ವಿತೀಯ ಪುಣ್ಯ ಸ್ಮರಣೆಯ ಹಿನ್ನೆಲೆ ನಾಳೆ ಗಣೇಶೋತ್ಸವ ಮಂಡಳಗಳಲ್ಲಿ ಪ್ರಸಾದ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದೆ.