Belagavi

ಬೆಳಗಾವಿಯ ರಾಜಾ…ಚವ್ಹಾಟಗಲ್ಲಿಯ ಗಣೇಶನ ದರ್ಶನ ಪಡೆದ ಹೆಸ್ಕಾಂ ಅಧಿಕಾರಿಗಳು

Share

ಬೆಳಗಾವಿಯ ರಾಜಾ ಚವ್ಹಾಟಗಲ್ಲಿ ಗಣಪತಿಯ ದರ್ಶನವನ್ನು ಇಂದು ಹೆಸ್ಕಾಂ ಎಇಇ ಅಶ್ವೀನ್ ಶಿಂಧೆ, ಮನೋಹರ್ ಸುತಾರ್ ಮತ್ತು ಭಜಂತ್ರಿ ಅವರು ಭೇಟಿ ನೀಡಿ ಗಣೇಶನ ಆರತಿಯಲ್ಲಿ ಭಾಗಿಯಾದರು.

ಈ ವೇಳೆ ಮಾತನಾಡಿದ ಅಧಿಕಾರಿಗಳು ಹೆಸ್ಕಾಂನಿಂದ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಬಗೆಹರಿಸಿ, ನಿರ್ವಿಘ್ನವಾಗಿ ವಿಘ್ನೇಶ್ವರನ ಉತ್ಸವವನ್ನು ಪೂರ್ಣಗೊಳಿಸಲು ಸಹಕರಿಸಲಾಗಿದೆ ಎಂದರು.

ಚವ್ಹಾಟ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದ ವತಿಯಿಂದ ಹೆಸ್ಕಾಂ ಅಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಂಡಳದ ಕಾರ್ಯಕರ್ತರು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!