ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ಗಣೇಶೋತ್ಸವದ ನಿಮಿತ್ಯ ಜೈ ಭೀಮ್ ಯುವಕ ಮಂಡಳದ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶುಕ್ರವಾರದಂದು ಬೆಳಗಾವಿಯ ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ಗಣೇಶೋತ್ಸವದ ನಿಮಿತ್ಯ ಜೈ ಭೀಮ್ ಯುವಕ ಮಂಡಳದ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ವಿಜಯಾ ಅರ್ಥೋಪೇಡಿಕ್ ಮತ್ತು ಸೆಂಟರ್ ಕೇರ್ ಆಸ್ಪತ್ರೆಯ ವೈದ್ಯರು ಆರೋಗ್ಯವನ್ನು ತಪಾಸಿಸಿದರು.
ಈ ಸಂದರ್ಭದಲ್ಲಿ ಗಣಪತ್ ದೇವರಮನಿ, ದುರ್ಗೇಶ್ ಮೇತ್ರಿ, ಜಯಪಾಲ್ ಇಟೇಕರ, ದೇವಪ್ಪಾ ಚೌಗುಲೆ, ಮುಕುಂದ ಚೌಗುಲೆ, ಗಜು ಪರಶುರಾಮ ಸುಳಗೇಕರ, ಅಭಿಷೇಕ ದೇವರಮನಿ, ಆಕಾಶ ಹಲಗೇಕರ, ಭಾವಕಣ್ಣಾ ಪಿರಗಾಣೆ, ಭಾವಕನ್ನಾ ಸುಳಗೇಕರ ಸೇರಿದಂತೆ ಹಲವರು ಶಿಬಿರದ ಸದುಪಯೋಗ ಪಡೆದುಕೊಂಡರು.