ಅಪ್ರಾಪ್ತೆ ಬಾಲಕಿಯನ್ನು ಪ್ರೀತಿಸುತ್ತಿದ್ದ ಎರಡು ಯುವಕರ ಗುಂಪುಗಳ ಮಧ್ಯೆ ಗಲಾಟೆಯಾಗಿ ಪರಸ್ಪರ ಚೂರಿ ಇರಿತದಿಂದ ನಾಲ್ವರು ಯುವಕರು ಗಾಯಗೊಂಡಿರುವ ಘಟನೆ ಜರುಗಿದೆ.

ಅಪ್ರಾಪ್ತೆ ಬಾಲಕಿಯನ್ನು ಪ್ರೀತಿಸುತಿದ್ದ ಮೊಹಮ್ಮದ್ ಖಾಜಿ, ಮೊಹಮ್ಮದ್ ಅಟ್ಮಸ್ ಗುಂಪಿನ ಮಧ್ಯೆ ಗಲಾಟೆಯಾಗಿದೆ. ಮೊಹಮ್ಮದ್ ಖಾಜಿಗೆ ಬಾಲಕಿ ಸಹವಾಸ ಮಾಡಬೇಡ ನನ್ನ ಫ್ರೆಂಡ್ ಲವರ್ ಅವಳು ಅಂತಾ ಮೊಹಮ್ಮದ್ ಅಟ್ಮಸ್ ಗುಂಪಿನಿಂದ ತಗಾದೆ. ಆಗ ಅಪ್ರಾಪ್ತೆ ಹುಡುಗಿ ಬೆನ್ನು ಬಿಡುವಂತೆ ಇಬ್ಬರೂ ಮಧ್ಯೆ ಕಿತ್ತಾಟ ನಡೆದಿದೆ. ಈ ಕಿತ್ತಾಟದಲ್ಲಿ ಪರಸ್ಪರ ಚೂರಿ ಇರಿತದಿಂದ ನಾಲ್ವರು ಯುವಕರು ಗಾಯಗೊಂಡಿರುವ ಘಟನೆ, ಬೆಳಗಾವಿ ನಗರದ ಅನ್ನಪೂರ್ಣ ವಾಡಿಯ ರಾಯಲ್ ಸ್ಕೂಲ್ ಬಳಿ ನಡೆದಿದೆ. ಮೊಹಮ್ಮದ್ ಖಾಜಿಗೆ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೊಹಮ್ಮದ್ ಅಟ್ಮಸ್ ಸೇರಿದಂತೆ ಇಬ್ಬರೂ ಅಪ್ರಾಪ್ತ ಬಾಲಕರು ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ಕೊಲೆ ಕೇಸ್ ದಾಖಲಾಗಿದೆ.