ಖಾನಾಪೂರ ತಾಲೂಕಿನ ನಂದಗಡದಲ್ಲಿ ದುರ್ಗಾ ಮಾತಾ ದೌಡು ಉತ್ಸಾಹದಿಂದ ನಡೆಯಿತು ಈ ದೌಡು ಲಕ್ಷ್ಮೀ ಮಂದಿರದಿಂದ ಪ್ರಾರಂಭವಾಯಿತು ಈ ದೌಡು ನಂದಗಡ ಪೋಲಿಸ್ ಠಾಣೆಯ ಹವಾಲ್ದಾರ್ ನಂದಗಡ ಬಿಟ್ ಪೋಲಿಸ್ ವಿಜಯ್ ಪಾಟೀಲರ ಹಸ್ತದಿಂದ ಪೂಜೆ ಸಲ್ಲಿಸಿ ಪ್ರಾರಂಭಿಸಲಾಯಿತು ಸಂಪೂರ್ಣ ಗ್ರಾಮದಲ್ಲಿ ದೌಡು ಸಂಚರಿಸಿ ಹಳೆಊರು, ಕಲ್ಮೇಶ್ವರ ಮಂದಿರದಲ್ಲಿ ಮುಕ್ತಾಯಗೊಂಡಿತು ಈ ಸಂದರ್ಭದಲ್ಲಿ ಶಿವಾಜಿ ಮಹಾರಾಜಕೀ ಜೈ,ಭಾರತ ಮಾತಾ ಕೀ ಜೈ, ಹರ್,ಹರ್ ಮಹಾದೇವ ಎಂಬ ಘೋಷಣೆಯೊಂದಿಗೆ ಚಿಕ್ಕವರು ದೊಡ್ಡವರು ದುರ್ಗಾ ಮಾತಾ ದೌಡು ಉತ್ಸಾಹದಿಂದ ನಡೆಯಿತು ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ,ಗ್ರಾಮದ ಹಿರಿಯರಾದ ಪಿ.ಕೆ.ಪಾಟೀಲ, ನಾಗೇಂದ್ರ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.