ನಾಳೆ ಬೆಳಗಾವಿಯಲ್ಲಿ ಭವ್ಯ ದಿವ್ಯ ಗಣೇಶ ವಿಸರ್ಜನೆ ನಡೆಯಲಿದ್ದು, ಬೆಳಗಾವಿಯ ಪೊಲೀಸರು ಇದಕ್ಕಾಗಿ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಮಿಷ್ನರ್ ಭೂಷಣ್ ಬೋರಸೆ ಅವರ ಮಾರ್ಗದರ್ಶನದಲ್ಲಿ ನಾಳೆ ಶಾಂತಿ ಸುವ್ಯವಸ್ಥೆಯೊಂದಿಗೆ ಗಣೇಶ ವಿಸರ್ಜನೆಗೆ ಅನುವು ಮಾಡಿಕೊಡಲಿದ್ದಾರೆ.

ನಾಳೆ ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗಾವಿ ಪೊಲೀಸರು ಸಿದ್ಧರಾಗಿದ್ದು, ಪೊಲೀಸ್ ಆಯುಕ್ತರ ನಿರ್ದೇಶನದಂತೆ ನಿಯೋಜಿತ ಸ್ಥಳಗಳಿಗೆ ತೆರಳಿ ಸೇವೆ ಸಲ್ಲಿಸಲಿದ್ದಾರೆ. 500 ವರಿಷ್ಠ ಅಧಿಕಾರಿಗಳು ಮತ್ತು 3000 ಆಧೀನ ಅಧಿಕಾರಿಗಳು, ರ್ಯಾಪಿಡ್ ಆಕ್ಷನ್ ಫೋರ್ಸ್, 10 ಕೆ.ಎಸ್.ಆರ್.ಪಿ ತುಕಡಿಗಳು, 9 ಸಿ.ಎ.ಆರ್ ತುಕಡಿಗಳು, 700 ಕ್ಯಾಮೇರಾಗಳು, 14 ಡ್ರೋಣ್’ಗಳನ್ನು ಬಂದೋಬಸ್ತಿಗಾಗಿ ಬಳಸಲಾಗುತ್ತಿದೆ. ಕಳೆದ 1 ತಿಂಗಳಿನಿಂದ ಪೊಲೀಸ್ ಇಲಾಖೆ ಗಣೇಶೋತ್ಸವ ಮಂಡಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಜನರು ಕೂಡ ಪೊಲೀಸ ಇಲಾಖೆಗೆ ಸಂಪರ್ಕಿಸಿ ಶಾಂತಿಯುತ ಗಣೇಶ ವಿಸರ್ಜನೆಗೆ ಸಹಕರಿಸಬೇಕೆಂದರು.
ಸಂಜೆ 4 ಗಂಟೆಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಆರಂಭಗೊಳ್ಳಲಿದೆ. ಹಲವಾರು ಮಂಡಳಗಳು ಪಾರಂಪರೀಕ ವಾದ್ಯಗಳನ್ನು ಬಳಸುತ್ತಿರುವುದು, ಪ್ರಶಂಸನೀಯ. ಮೆರವಣಿಗೆ ಮಾರ್ಗದಲ್ಲಿ 45 ಆಸ್ಪತ್ರೆಗಳಿವೆ ಈ ಹಿನ್ನೆಲೆ ಡಿಜೆ ಬಳಸುವವರು ಇದಕ್ಕೆ ಗಮನಕ್ಕೆ ತೆಗೆದುಕೊಂಡು ಸೌಂಡ್ ಸಿಸ್ಟಮಗಳನ್ನು ಬಳಸಲಿ. ಕಳೆದ 10 ವರ್ಷದ ಇತಿಹಾಸದಲ್ಲಿ ನಡೆದ ಯಾವುದೇ ರೀತಿಯ ಸಮಸ್ಯೆಗಳು ಮರುಕಳಿಸದಂತೆ ನಿಗಾವಹಿಸಲಾಗುತ್ತಿದೆ. ನಾಳೆ 1019 ಗಣೇಶ ಮೂರ್ತಿಗಳನ್ನು ನಗರಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ ಎಂದರು.