ಚಿಕ್ಕೋಡಿ:ಗಣೇಶ ವಿಸರ್ಜನೆಯ ಸಂಧರ್ಭದಲ್ಲಿ ಡಿಜೆ ಬಳಕೆಯಿಂದ ಅಂಕಲಿ ಗ್ರಾಮದಲ್ಲಿ ಬಹಳಷ್ಟು ದುಷ್ಪರಿಣಾಮ ಬಿಳುತ್ತಿದ್ದು,ಈ ಕಾರಣಕ್ಕಾಗಿ ಡಿಜೆ ಬಳಕೆ ನಿಷೇದಿಸುವಂತೆ ಆಗ್ರಹಿಸಿ ಅಂಕಲಿ ಗ್ರಾಮಸ್ಥರು ಪಿಎಸ್ಐ ನಂದೀಶಯವರಿಗೆ ಹಿರಿಯರಾದ ಜಗದೀಶ ಕೋರೆ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿದರು.

ಇದೇ ಸಂಧರ್ಭದಲ್ಲಿ ಜಗದೀಶ ಕೋರೆ,ತುಕಾರಾಮ ಪಾಟೀಲ, ವಿಕಾಸ ಪಾಟೀಲಯವರು ಮಾಧ್ಯಮಗಳ ಜೊತೆಗೆ ಮಾತನಾಡಿ ಕೆಲವು ವರ್ಷಗಳಿಂದ ಗಣೇಶ ವಿಸರ್ಜನೆಯ ಸಂಧರ್ಭದಲ್ಲಿ ಅತಿಯಾಗಿ ಡಿ.ಜೆ.ಸೌಂಡಗಳನ್ನು ಬಳಕೆ ಮಾಡಲಾಗುತ್ತಿದೆ.ಈ ಶಬ್ದದಿಂದ ಹಿರಿಯರು,ಶಾಲಾ ಮಕ್ಕಳಿಗೆ ಹಾಗೂ ಹೃದಯ ಸಂಬಂದಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಈ ಡಿ.ಜೆ.ಶಬ್ದವು ದುಷ್ಪರಿಣಾಮ ಬಿಳುತ್ತಿದೆ.ಅದಲ್ಲದೇ ರಾತ್ರಿ ಸಮಯದಲ್ಲಿ ನಿದ್ರೆ ಕದಡುವುದು.ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ.ಅಶಾಂತಿ ವಾತಾವರಣ ನಿರ್ಮಾಣವಾಗುವ ಲಕ್ಷಣ ಗೋಚರಿಸುತ್ತವೆ.ಡಿ.ಜೆ.ಸೌಂಡಗಳಿಂದ ಯುವಕರು ಮದ್ಯಪಾನ,ಮಾದಕ ವಸ್ತುಗಳ ಸೇವನೆಯನ್ನು ಮಾಡಿ ಕುಣಿದು ಕುಪ್ಪಳಿಸುತ್ತಾರೆ.ಇದರಿಂದಾಗಿ ಗಲಭೆ, ಗೊಂದಲಗಳು ಉಂಟಾಗಿ ಜನರಗಳ ಮಧ್ಯೆ ದ್ವೇಶದ ಭಾವನೆಗಳು ಉಂಟಾಗುತ್ತೆ.ಈ ಎಲ್ಲಾ ಕಾರಣಗಳಿಂದ ಅಂಕಲಿ ಗ್ರಾಮದಲ್ಲಿ ಶಾಂತಿಯುತವಾಗಿ ಗಣೇಶ ವಿಸರ್ಜನೆಯ ಉದ್ದೇಶದಿಂದ ಡಿ.ಜೆ.ಸೌಂಡಗಳ ಬಳಕೆಯನ್ನು ನಿಷೇದಿಸಿ,ವಾದ್ಯ ಮೇಳದ ಬಳಕೆ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಬಾಳಾಪ್ಪಾ ಉಮರಾಣಿ,ಜಗದೀಶ ಕೋರೆ,ಸುರೇಶ ಕೋರೆ,ರಣಜೀತ ಶಿರಶೇಟ್,ಪಾಪು ಕಿಲ್ಲೆಕತ,ಪಾಂಡುರಂಗ ವಡ್ಡರ,ವಿಕಾಸ ಪಾಟೀಲ, ತುಕರಾಮ ಪಾಟೀಲ, ವಿವೇಕ ಕಮತೆ,ಶ್ರೀಕಾಂತ ಕಿಲ್ಲೇಕತ,ಬಸವರಾಜ ಕರಾಡಕರ,ತಮ್ಮಾನಿ ಗುಂಡಕಲ್ಲೆ,ಕಲ್ಲಪ್ಪ ಗುಂಡಕಲ್ಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.