BELAGAVI

ಚಿನ್ನ ಕದ್ದ ಆರೋಪ 18ರ ಯುವಕನನ್ನು ಹೊಡೆದು ಕೊಂದ ಆರೋಪ…

Share

ಹೊಟೇಲ್’ನಲ್ಲಿ ಚಿನ್ನ ಕದ್ದಿದ್ದಾನೆಂದು ಆರೋಪಿಸಿ 18 ವರ್ಷದ ಯುವಕನನ್ನು ಕೋಣೆಯಲ್ಲಿ ಕೂಡು ಹಾಕಿ ಮನಬಂದಂತೆ ಥಳಿಸಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ ನಡೆದಿದೆ. ಖಾನಾಪೂರ ತಾಲೂಕಿನ ರುಮೇವಾಡಿ ಕ್ರಾಸಿನಲ್ಲಿರುವ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ ಮಯೇಕರ ಎಂಬ (18) ಯುವಕನನ್ನು ಚಿನ್ನ ಕದ್ದ ಆರೋಪದ ಹಿನ್ನೆಲೆ ಅಮಾನವೀಯವಾಗಿ ಥಳಿಸಿದ ಹಿನ್ನೆಲೆ ತೀವ್ರ ಗಾಯಗೊಂಡ ಯುವಕ ಸಾವನ್ನಪ್ಪಿದ್ದಾನೆ. ಕುಟುಂಬಕ್ಕೆ ಆಸರೆಯಾಗಿದ್ದ ಏಕಮಾತ್ರ ಮಗನನ್ನು ಕಳೆದುಕೊಂಡು ತಂದೆ ತಾಯಿ ಕಣ್ಣೀರು ಹಾಕಿದ್ದಾರೆ.

ಕಳ್ಳತನದ ಆರೋಪ ಹೊರಿಸಿ ಹೊಟೇಲ್ ಮಾಲೀಕರು ಕೋಣೆಯಲ್ಲಿ ಕೂಡು ಹಾಕಿ ಸಹೋದರನನ್ನು ಹೊಟೇಲ್ ಮಾಲೀಕ ಮತ್ತು ಆತನ ಸಹೋದರ ಮನಬಂದಂತೆ ಥಳಿಸಿ, ಪೊಲೀಸರಿಗೆ ದೂರು ನೀಡಿದರೇ ಬೆದರಿಕೆ ಹಾಕಿದ್ದರು. ಮತ್ತೇ ಹೊಟೇಲ್’ಗೆ ಕರೆದೊಯ್ದು ಕೋಣೆಯಲ್ಲಿ ಕೂಡು ಹಾಕಿ ಹೊಡೆದಿದ್ದಾರೆ. ಅಸ್ವಸ್ಥತೆ ಹೆಚ್ಚಾದ ಹಿನ್ನೆಲೆ ಹೊಟೇಲ್ ಮಾಲೀಕರು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಆದರೇ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ. ಹೊಟೇಲ್’ನಲ್ಲಿ 5 ತೊಲೆ ಚಿನ್ನ ಯಾರು ಇಡುತ್ತಾರೆ? ಸಹೋದರನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಮಹಾಬಳೇಶ್ವರ ಅಣ್ಣು ಮಯೇಕರ ಹೇಳಿದರು. ಬೈಟ್

ಇನ್ನು ನಾಗೇಶ ಗುಂಡು ಬೆಡ್ರೆ ಹಾಗೂ ಆತನ ಸಹೋದರ ವಿಜಯ ಗುಂಡು ಬೆಡ್ರೆ ಎಂಬ ಹೊಟೇಲ್ ಮಾಲೀಕರೇ 18 ವರ್ಷದ ಯುವಕನನ್ನು ಹೊಡೆದು ಕೊಲೆ ಮಾಡಿದ್ದಾರೆ. ದೂರು ನೀಡಿದರೇ, ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆಂದು ಅರ್ಜುನ ಶಂಕರ್ ಮರಾಠೆ ಹೇಳಿದರು.

ಈ ಘಟನೆಯೂ ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತ ಯುವಕನ ಮರಣೋತ್ತರ ಪರೀಕ್ಷೆಯೂ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.

Tags:

error: Content is protected !!