ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಶಂಕಿತ ಆರೋಪಿ ಧನಂಜಯ ಮಾರುತಿ ಮಾನೆ (24)
ನಿಪ್ಪಾಣಿ ತಾಲೂಕಿನ ಶಿರಗುಪ್ಪಿ ನಿವಾಸಿ. ಆರೋಪಿಯನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.

ಬಾಲಕಿ ತನ್ನ ಚಿಕ್ಕಪ್ಪನ ವಾಸ್ತು ಶಾಂತಿ ಕಾರ್ಯಕ್ರಮಕ್ಕೆ ಬಂದಿದ್ದ ಸಂಧರ್ಭದಲ್ಲಿ ಆರೋಪಿ ಮೇ 28 ರಿಂದ ಜೂನ್ 1 ರ ನಡುವೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆ ಬೆಳಕಿಗೆ ಬಂದ ನಂತರ ಬಾಲಕಿಯ ಸಂಬಂಧಿಕರು ನಿಪ್ಪಾಣಿ ಶಹರ ಪೊಲೀಸರಿಗೆ ದೂರು ನೀಡಿದ್ದರು.
ಸಿಪಿಐ ಬಿ.ಎಸ್. ತಲ್ವಾರ ಅವರ ಮಾರ್ಗದರ್ಶನದಲ್ಲಿ ಸಬ್-ಇನ್ಸ್ಪೆಕ್ಟರ್ ಶಿವಾನಂದ ಕಾರಜೋಳ ತಕ್ಷಣ ಈ ಬಗ್ಗೆ ತನಿಖೆ ನಡೆಸಿ, ಪೋಕ್ಸೋ ಕಾಯ್ದೆಯಡಿ ಶಂಕಿತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ, ಶಂಕಿತ ಪರಾರಿಯಾಗಿದ್ದ. ನಗರ ಪೊಲೀಸರು ಭಾನುವಾರ ಶಂಕಿತನನ್ನು ಬಂಧಿಸಿ ಸೋಮವಾರ ನಿಪ್ಪಾಣಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು, ನಂತರ ಆರೋಪಿಯನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.
