ಶ್ರಾವಣ ಮಾಸದ ನಿಮಿತ್ಯ ದಕ್ಷಿಣ ಕಾಶಿ ಶ್ರೀಕ್ಷೇತ್ರ ಕಪಿಲೇಶ್ವರದಲ್ಲಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಭಕ್ತಿಭಾವದಲ್ಲಿ ನಡೆಯಿತು.
ಶ್ರಾವಣ ಮಾಸವು ಪುಣ್ಯಶ್ರವಣ ಮತ್ತು ಧಾರ್ಮಿಕ ಸೇವೆಗಳ ಪವಿತ್ರ ಮಾಸವಾಗಿದೆ. ಬೆಳಗಾವಿಯ ಶ್ರೀ ಕ್ಷೇತ್ರ ಶಿವನ ಆಸ್ಥಾನ ಮತ್ತು ದಕ್ಷಿಣ ಕ್ಷೇತ್ರ ಶ್ರೀ ಕಪಿಲೇಶ್ವರದಲ್ಲಿ ಶ್ರಾವಣ ಮಾಸದ ಸಂಭ್ರಮ ಮನೆ ಮಾಡಿತ್ತು. ಪ್ರತಿ ಶ್ರಾವಣ ಮಾಸದ ಸೋಮವಾರ ಶ್ರೀ ಕಪೀಲನಾಥನ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಸಾವಿರಾರು ಭಕ್ತರು ಈ ಉತ್ಸವಕ್ಕೆ ಸಾಕ್ಷಿಯಾಗುತ್ತಾರೆ. ವಾದ್ಯಮೇಳಗಳೊಂದಿಗೆ ನಡೆಯುವ ಪಲ್ಲಕ್ಕಿ ಮೆರವಣಿಗೆಯನ್ನು ಕಣ್ಮುಂಬಿಕೊಳ್ಳುವುದೇ ಒಂದು ಸಂಭ್ರಮ.
ಈ ಸೋಮವಾರ ನಮ್ಮ ಇನ್ ನ್ಯೂಜನ ಸಂಪಾದಕರಾದ ರಾಜಶೇಖರ್ ಪಾಟೀಲ್ ಅವರಿಗೆ ಪಲ್ಲಕ್ಕಿ ಪೂಜೆ ಮತ್ತು ಪಲ್ಲಕ್ಕಿ ಹೊರುವ ಸನ್ಮಾನ ದೊರೆಯಿತು. ಬಮ್ ಬಮ್ ಭೋಲೆ ಶಿವ ಶಿವ ಭೋಲೆ ಎಂದು ಜಯಘೋಷಗಳನ್ನು ಕೂಗುತ್ತ ಪಲ್ಲಕ್ಕಿ ಪ್ರದಕ್ಷಿಣೆ ಆರಂಭಗೊಂಡಿತು.
ಪ್ರತಿವರ್ಷದಂತೆ ಈ ಬಾರಿಯೂ ಮೂರನೇ ಶ್ರಾವಣ ಮಾಸದ ನಿಮಿತ್ಯ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶ್ರಾವಣ ಮಾಸದ ನಿಮಿತ್ಯ ದಕ್ಷಿಣ ಕಾಶಿ ಶ್ರೀ ಕ್ಷೇತ್ರ ಕಪಿಲೇಶ್ವರದಲ್ಲಿ ವಿವಿಧ ಪುಣ್ಯ ಕ್ಷೇತ್ರಗಳ ಪ್ರತಿಕೃತಿಗಳನ್ನು ಮಾಡಲಾಗುತ್ತದೆ. ಈ ಬಾರಿ ಜಗ್ಪ್ರಸಿದ್ಧವಾದ ಓಡಿಶಾದಲ್ಲಿನ ಜಗನ್ನಾಥಪೂರಿ ಧಾಮದ ಪ್ರತಿಕೃತಿಯನ್ನು ಸಾಕಾರಗೊಳಿಸಲಾಗಿದೆ. ಭಾನುವಾರ ರಾತ್ರಿ 12 ಗಂಟೆಗೆ ಮೊದಲ ಅಭಿಷೇಕವನ್ನು ಮಾಡಿ ಶ್ರಾವಣ ಮಾಸದ ಆಚರಣೆಯನ್ನು ಮಾಡಲಾಗುತ್ತದೆ. ಶ್ರಾವಣ ಸೋಮವಾರ ಮತ್ತು ಪ್ರತಿ ಸೋಮವಾರ ಸಂಜೆ ಪಲ್ಲಕ್ಕಿ ಉತ್ಸವ, ಮಹಾಆರತಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ದೇವಸ್ಥಾನದ ವಿಶ್ವಸ್ಥರಾದ ಅಭಿಜೀತ್ ಚವ್ಹಾಣ್ ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿಯಾಗಿದ್ಧರು.