ಖಾನಾಪುರದಲ್ಲಿ ‘ಅಲೈಯನ್ಸ್ ಕ್ಲಬ್ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ನ್ನು ಶಾಸಕ ವಿಠ್ಠಲ ಹಲಗೇಕರ ಅವರು ಲೋಕಾರ್ಪಣೆಗೊಳಿಸಿದರು.
ಖಾನಾಪುರ ತಾಲೂಕಿನ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ, ಅಲೈಯನ್ಸ್ ಕ್ಲಬ್ ಇಂಟರ್ನ್ಯಾಷನಲ್, ಡಿ.131 ಕರ್ನಾಟಕ & ಗೋವಾ ವತಿಯಿಂದ “ಅಲೈಯನ್ಸ್ ಕ್ಲಬ್ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್” ಘಟಕದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಶನಿವಾರದಂದು ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಖಾನಾಪುರ ಶಾಸಕರು ಮತ್ತು ಶ್ರೀ ಮಹಾಲಕ್ಷ್ಮಿ ಗ್ರೂಪ್, ತೋಪಿನಕಟ್ಟಿಯ ಸಂಸ್ಥಾಪಕ ಅಧ್ಯಕ್ಷರಾದ ವಿಠ್ಠಲರಾವ್ ಹಲಗೇಕರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಂಡನ್ ಯುಕೆ, ಡೆನ್ಬಿಗ್ಷೈರ್ ಕೌಂಟಿ ಕೌನ್ಸಿಲರ್ ಭದ್ರತಾ ವಿಭಾಗದ ಸಲಹೆಗಾರರಾದ ರಾಜೀವ್ ಮೇತ್ರಿ ಅವರು ಉಪಸ್ಥಿತರಿದ್ಧರು. (ಫ್ಲೋ)
ಗೌರವ ಅತಿಥಿಗಳಾಗಿ ಅಲೈಯನ್ಸ್ ಕ್ಲಬ್‌ನ ಜಿಲ್ಲಾ ಚೇರ್‌ಪರ್ಸನ್ ಅಡ್ವೋ. ರವೀಂದ್ರ ಎನ್. ತೋಟಿಗೇರ್, ಅಲೈಯನ್ಸ್ ಕ್ಲಬ್ ಬೆಳಗಾವಿ ಸ್ಮಾರ್ಟ್ ಸಿಟಿಯ ಅಧ್ಯಕ್ಷ ಅಡ್ವೋ. ಧನ್ಯಕುಮಾರ್ ಪಾಟೀಲ್, ಮತ್ತು ಅಲೈಯನ್ಸ್ ಕ್ಲಬ್ ಬೆಳಗಾವಿ ಸ್ಮಾರ್ಟ್ ಸಿಟಿಯ ಅಧ್ಯಕ್ಷ ಆನಂದ್ ಎನ್. ಶೆಟ್ಟಿ ಅವರು ಉಪಸ್ಥಿತರಿದ್ದರು.