ಮಳೆ ಚೆನ್ನಾಗಿ ಆಗಿದೆ, ಬೆಳೆ ಚೆನ್ನಾಗಿ ಬಂದಿದೆ, ಎರಡು ಎಕರೆ ಭೂಮಿಯಲ್ಲಿ ಇಪ್ಪತ್ತು ಟ್ರಾಕ್ಟರ್ ಸಗಣಿ ಗೊಬ್ಬರ ಹಾಕಿ ಬೆಳೆ ಬೆಳೆಸಿದ್ದ ಸೋಯಾಬಿನ್ ಬೆಳೆ ಕಾಳು ಕಟ್ಟದೆ ಇರುವುದರಿಂದ್ದ ವೃದ್ಧ ರೈತನೊಬ್ಬ ನನ್ನ ಜೀವನಾ ಇದರಾಗ ಐತೋ ಏನ ಮಾಡಲಿ ನಾನು ಎಂದು ಕಣ್ಣೀರು ಹಾಕಿ ವಿಡಿಯೋ ಮಾಡಿ ಕಳಪೆ ಬೀಜ ವಿತರಣೆ ಮಾಡಿದ ಕೃಷಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗಿದೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದ ದೊಡ್ಡನಾಯಕ್ ಶಿವನಾಯಕರ್ ಎಂಬುವರು ತಮ್ಮ ಎರಡು ಎಕರೆ ಪ್ರದೇಶದಲ್ಲಿ ಇಪ್ಪತ್ತು ಟ್ರಾಕ್ಟರ್ ಸಗಣಿ ಗೊಬ್ಬರ ಹಾಕಿ ಸೋಯಾಬಿನ್ ಬೆಳೆದಿದ್ದರು, ಅದಕ್ಕೆ ಹತ್ತು ಸಲ ಕೀಟನಾಶಕ ಎಣ್ಣೆ ಹೊಡೆದಿದ್ದರು. ಬೆಳೆ ಚೆನ್ನಾಗಿ ಬಂದರು ಕಳಪೆ ಬೀಜದಿಂದ ಕಿಟಬಾಧೆಗೆ ಸೋಯಾಬಿನ್ ಕಾಳು ಕಟ್ಟಿಲ್ಲ. ಇದರಿಂದ ನೋಂದ ವೃದ್ಧ ಅನ್ನದಾತ ಕೃಷಿ ಇಲಾಖೆಯ ಅಧಿಕಾರಿಗಳ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಎಲ್ಲ ರೈತರಿಗೆ ನೀಡಿದ ಸೋಯಾಬಿನ್ ಬೀಜ ನಿಂಗು ವಿತರಿಸಿದೆ ಎಂಬ ಅಧಿಕಾರಿಗಳ ಬೇಜಾಬ್ದಾರಿ ಉತ್ತರದಿಂದ ವೃದ್ಧ ರೈತ ದೊಡ್ಡನಾಯಕ್ ಶಿವನಾಯಕರ್ ಇವರ ಎಂತಾ ಬೀಜ ಕೊಟ್ಟಾರ ನೋಡರಿ, ಇದಾರ ಏನ ಐತಿ ನೋಡರಿ, ನನ್ನ ಜೀವನಾ ಇದರಾಗ ಐತೋ ಏನ ಮಾಡಲಿ ನಾನು ಎಂದು ಕಣ್ಣೀರು ಹಾಕಿ, ಪರಿಹಾರ ಕೊಡೊದಿಲ್ಲ ಅಂದರೆ ನಾವ ಬಿಡೋದಿಲ್ಲ ಎಂದ ಎಚ್ಚರಿಕೆ ಕೊಟ್ಟಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಅಲ್ಲದೆ ರೈತ ಬೆಳೆದ ಸೋಯಾಬಿನ್ ಬೆಳೆ ಕಾಳು ಕಟ್ಟದೆ ಇರುವುದರಿಂದ್ದ ಟ್ರಾಕ್ಟರ್ ಹಚ್ಚಿ ಬೆಳೆದಿರುವ ಬೆಳೆಯನ್ನು ತೆಗೆಯುತ್ತಿದ್ದಾನೆ. ರೈತರು ಕೃಷಿಯನ್ನು ಮಾಡಲು ಹಿಂದೆಟ್ಟು ಹಾಕುತ್ತಿರುವಾಗ, ಕಳಪೆ ಬೀಜಗಳ ವಿತರಿಸಿ ಅವರ ಜೀವದ ಜೋತೆಗೆ ಚಲ್ಲಾಟವಾಡುದನ್ನು ನಿಲ್ಲಿಸಬೇಕಾಗಿದೆ. ಅನ್ನದಾತರು ಈ ದೇಶದ ಬೇನ್ನಲಬು ಎನ್ನುವ ರಾಜಕಾರಣಿಗಳು ಅವನ ಸಂಕಷ್ಟಕ್ಕೆ ಬಾರದೆ ಇರುವುದು ವಿಪರ್ಯಾಸವಾಗಿದೆ.
ವೃದ್ಧ ರೈತ ದೊಡ್ಡನಾಯಕ್ ಶಿವನಾಯಕರ್ ಮಾತನಾಡಿ, ಇದಕ್ಕೆ ಏನು ಮಾಡಬೇಕು ಅದನ್ನೆಲ್ಲ ಮಾಡಿ ಮುಗಿಸಿದ್ದೇನೆ. ಗೊಬ್ಬರ ಹಾಕೋದು ಮುಗಿತು, ಎಣ್ಣೆ ಹೊಡೆಯೊದು ಮುಗಿತು, ಆದರೆ, ಬೆಳೆಯಲ್ಲಿ ಏನಿದೆ ನೋಡರಿ. ಇವರು ಎಂತಹ ಬೀಜ ಕೊಡತ್ತಾರೋ, ಎಂತಹ ಗೊಬ್ಬರ ಕೊಡತ್ತಾರೋ, ನಮಗೆ ತಿಳಿದಂಗ ಆಗೇತಿ, ಬೆಳೆ ಬೆಳೆಸಿದ್ದೇನೆ. ನೋಡರಿ ಹ್ಯಾಂಗ ಐತಿ, ಎರಡು ಎಕರೆಗೆ ಇಪ್ಪತ್ತು ಟ್ರಾಕ್ಟರ್ ಸಗಣಿ ಗೊಬ್ಬರ ಹಾಕಿದ್ದೇನಿ, ನನ್ನ ಜೀವನಾ ಇದರಾಗ ಐತೋ ಏನ ಮಾಡಲಿ ಕೃಷಿಯ ಅಧಿಕಾರಿಗಳನ್ನ ಕೇಳಿದರೆ ಎಲ್ಲರಿಗೂ ಕೊಟ್ಟಿದ್ದನ್ನ ನನಗೂ ಕೊಟ್ಟಿದ್ದೇವೆ ಅಂತಾರೆ.ಏನ ಕೊಡತ್ತಾರ ಇವರು ಹೊಲಸು ರಾಡಿ, ಪರಿಹಾರ ಕೊಡೊದಿಲ್ಲ ಅಂದರೆ ನಾವ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ರೈತ ಮುಖಂಡರು ಮಾತನಾಡಿ, ಸೋಯಾಬಿನ್ ಬೆಳೆ ಕಾಳು ಕಟ್ಟದೆ ಇರುವುದು ಈ ಗ್ರಾಮದ ಒಂದು ಕಥೆಯಲ್ಲ, ಬೈಲಹೊಂಗಲ, ಬೆಳಗಾವಿ, ಸವದತ್ತಿ ತಾಲೂಕಿನಲ್ಲಿ ಸೋಯಾಬಿನ ಬೆಳೆಯ ಪರಿಸ್ಥಿತಿ ಈ ರೀತಿಯಾಗಿದೆ.ರೈತನಿಗೆ ಒಂದು ಬೆಂಬಲ ಬೇಕು. ಸೋಯಾಬಿನ್ ಬೆಳೆಗೆ ಬೆಂಬಲ ಬೆಲೆ ಇಲ್ಲ, ಆದರೂ ಕೂಡ ರೈತ ಬೆಳದಿದ್ದಾನೆ. ಆಗಿರುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.