raybag

ಕೇವಲ ಐದು ಸಾವಿರ ಹಣಕ್ಕೆ ಯುವ ಗಾಯಕನ ಹತ್ಯೆ

Share

ದೋಸ್ತಾ ದೋಸ್ತಾ ಅಂತಿದ್ರು ಕೊಟ್ಟ ಹಣ ಕೇಳಿದ್ರು ಕೊಟ್ಟಿಲ್ಲ ಅಂತಾ ಕೊಂದು ಎಸ್ಕೇಪ್ ಆದ್ರು 5 ಸಾವಿರ ಹಣದ ವಿಚಾರವಾಗಿ ಕುಟುಂಬಸ್ಥರೇಲ್ಲರೂ ಸೇರಿಕೊಂಡು ಯುವ ಜನಾಪದ ಗಾಯಕನನ್ನು ಹತ್ಯೆ ಮಾಡಿ ಹಂತಕರು ಅಪಘಾತ ಎನ್ನುವ ರೀತಿಯಲ್ಲಿ ವಾಹನ ಪಲ್ಟಿ ಮಾಡಿ ಆರೋಪಿಗಳು ಪರಾರಿಯಾಗಿರುವ ಘಟನೆಯೊಂದು ಜರುಗಿದೆ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೂದಿಹಾಳ ಸಮೀಪ ಕೇವಲ 5000 ರೂಪಾಯಿ ವಿಚಾರಕ್ಕೆ ಯುವ ಜಾನಪದ ಗಾಯಕ 22 ವರ್ಷದ ಮಾರುತಿ ಅಡಿವೆಪ್ಪ ಲಟ್ಟೇ ಅವರನ್ನು ರಾಡು ಮಾರಕಾಸ್ತ್ರಗಳಿಂದ ಕೊಚ್ಚಿ ನಂತರ ಕಾರ್ ಹರಿಸಿ ಗಾಯಕ ಕೊಲೆ ಮಾಡಲಾಗಿದೆ. ಈರಪ್ಪ ಅಕ್ಕಿವಾಟೆ ಸೇರಿದಂತೆ 11 ಜನ ಆರೋಪಿಗಳು ಮಾರುತಿ ಕೊಲೆ ಮಾಡಿದ್ದಾರೆ ಉತ್ತರ ಕರ್ನಾಟಕದ ಶೈಲಿಯ ಹಾಡುಗಳ ಮೂಲಕ ಮಾರುತಿ ಮನೆ ಮಾತಾಗಿದ್ದರು. ರಾತ್ರಿ ಸ್ನೇಹಿತನ ಜೊತೆ ಬೈಕ್ ನಲ್ಲಿ ಬರುವಾಗ ಅವರ ಮೇಲೆ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರುತಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿ ಬಳಿಕ ಕಾರ್ ಹತ್ತಿಸಿದ್ದಾರೆ. ಆರೋಪಿ ಈರಪ್ಪನ ಬಳಿ ಮಾರುತಿ 50,000 ರೂ. ಸಾಲ ಪಡೆದುಕೊಂಡಿದ್ದು, 45,000 ವಾಪಸ್ ನೀಡಿದ್ದ. ಬಾಕಿ 5 ಸಾವಿರ ರೂಪಾಯಿ ವಿಚಾರಕ್ಕೆ ಕೊಲೆ ಮಾಡಲಾಗಿದೆ. ಹತ್ಯೆಯ ನಂತರ ಮಾರುತಿಯ ಮೇಲೆ ಆರೋಪಿಗಳು ಕಾರ್ ಹತ್ತಿಸಿದ್ದಾರೆ. ಈ ವೇಳೆ ಕಾರ್ ಪಲ್ಟಿಯಾಗಿ ಆರೋಪಿಗಳು ಗಾಯಗೊಂಡಿದ್ದಾರೆ. ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿ ಈರಪ್ಪನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸಿದ್ದರಾಮ ಒಡೆಯರ್, ಆಕಾಶ್ ಪೂಜಾರಿಯವರನ್ನು ಪೊಲೀಸರು ಬಂಧಿಸಿದ್ದಾರೆ. ರಾಯಭಾಗ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಕೇಸು ದಾಖಲಾಗಿದೆ. ಇನ್ನೂಳಿದ ಆರೋಪಿಗಳು ಪರಾರಿಯಾಗಿದ್ದಾರೆ

ಕೋಲೆಯಾದ ಮಾರುತಿಯ ಸ್ನೇಹಿತ ಮಹಾಂತೇಶ ಘಂಟಿ ಮಾತನಾಡಿ ಕಬ್ಬಿನ ಗ್ಯಾಂಗ್‌ನಲ್ಲಿ ಕೆಲಸ ಮಾಡಲು ಬರುವುದಾಗಿ 50 ಮುಂಗಡ ಹಣ ಪಡೆದಿದ್ದ ಇತ್ತೀಚೆಗೆ ಮಾರುತಿಗೆ ಹಾಡಿನಲ್ಲಿ ಡಿಮ್ಯಾಂಡ್ ಬಂದಿತ್ತು ಕೆಲಸ ಬಿಟ್ಟು ಹಾಡು ಬರೆಯುವುದು, ಹಾಡುವುದರಲ್ಲಿ ಬಿಜಿಯಾಗಿದ್ದ ಈರಪ್ಪ ಹಣ ಕೇಳಿದಾಗ ಮನೆಯಲ್ಲಿ ಅವರ ತಾಯಿಯ ಚಿನ್ನವನ್ನು ಅಡವಿಟ್ಟು 45,000 ವಾಪಸ್ ನೀಡಿದ್ದ. ಬಾಕಿ 5 ಸಾವಿರ ರೂಪಾಯಿ ವಿಚಾರವಾಗಿ ಬೂದಿಹಾಳ ಗ್ರಾಮದಲ್ಲಿ ನಾನು ಮಾರುತಿ ಹಾಗೂ ಇನ್ನೋಬ್ಬ ಸ್ನೇಹಿತ ಕುಳಿತುಕೊಂಡಾಗ ಕಾರಿನಲ್ಲಿ ಬಂದ ಈರಪ್ಪನ ಹಣ ಕೊಡು ಎಂದು ಮುಂದೆ ಹೋಗಿ ಮಾತನಾಡೋಣ ಎಂದು ಕರೆದಾಗ ನಾವು ನಮ್ಮ ಬಳಿಯಿದ್ದ ಎರಡು ದ್ವೀಚಕ್ರ ವಾಹನಗಳಲ್ಲಿ ಹೋರಾಟ ಕಾರಿನಲ್ಲಿದ್ದವರು ಮಾರುತಿಗೆ ರಾಡನಿಂದ ಹೊಡೆದು ಕೆಡವಿ ಮಾರುಕಾಸ್ತ್ರಗಳಿಂದ ಕೊಚ್ಚಿ ಕೊಲ್ಲೆ ನಂತರ ಮಾರುತಿಯ ಮೇಲೆ ಆರೋಪಿಗಳು ಕಾರ್ ಹತ್ತಿಸಿದ್ದಾರೆ. ಅಪಘಾತ ಎನ್ನುವ ರೀತಿಯಲ್ಲಿ ಬಿಂಬಸಲು ಕಾರ್ ಮೇಲೆ ತಾವೇ ಕಲ್ಲು ಎಸೆದಿದ್ದಾರೆ ನಾನೂ 100 ಮಿಟರ್ ದೂರದಲ್ಲಿದೆ ಅವನು ಹಿಡಿಯಿರಿ ಎನ್ನುವಷ್ಟರಲ್ಲಿ ನಾನು ಅಲ್ಲಿಂದ ಹೋದೆ ನನ್ನ ಸೇಹಿತನ ಸಾವಿಗೆ ನ್ಯಾಯ ದೊರೆಯಬೇಕೆಂದು ಹೇಳಿದರು.
ಮೃತ ಮಾರುತಿ ಸಹೋದರಿ ಮಲ್ಲವ್ವಾ ಹೊಸಮನಿ ಮಾತನಾಡಿ, ನನ್ನ ತಮ್ಮ ಹೊಲಮನಿ ಕೆಲಸ ಮಾಡಿಕೊಂಡು ಎಲ್ಲಾರೂ ಜೊತೆಗೆ ಚಲೋ ಇದ್ದ ಈರಪ್ಪನ ಕುಟುಂಬ ಮೊದಲಿಂದಲೂ ನಮ್ಮ ಜೊತೆ ಸ್ಪಲ್ಪ ಹಾಗೇ ಆದರೂ ಮಾರತಿ ಅವರ ಜೋತೆಗೆ ಮಾತನಾಡುತ್ತಾ ಚಲೋ ಇದ್ರ ಈಗ ಅಂವ ಹಾಡ ಬರೋಯುವುದು ಹಾಡ ಹಾಡುವುದು ಮಾಡಿ ಹೆಸರು ಮಾಡತಾನಲ್ಲ ಅವರಿಗೆ ಹೊಚ್ಚೆ ಕಿಟ್ಟು ಅವರ ಮನೆ ನಮ್ಮ ಮನೆ ಅಲ್ಪಸ್ವಲ್ಪ ದೂರಲ್ಲಿವೆ ಅವರ ಹೊಟ್ಟೆ ಕಿಚ್ಚಿಗೆ ಈ ರೀತಿ ನನ್ನ ತಮ್ಮನನ್ನು ಬಲಿಯಾಗ್ಯಾನ ಎಂದರು

Tags:

error: Content is protected !!