BELAGAVI

ಡಾ. ನಾಗರಾಜ ಪಾಟೀಲ ಅವರ ಮಾಹಿತಿ ಪರಿಪೂರ್ಣ ಸ್ಫೂರ್ತಿದಾಯಕ ಉಪನ್ಯಾಸ

Share

ಬೆಳಗಾವಿಯ ಜ್ಯೋತಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕೆಎಲ್‌ಇ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಜುಲೈ 11 ರಂದು ಜಾಗತಿಕ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾಧ್ಯಾಪಕ ಡಿ.ಎ. ನಿಂಬಾಳಕರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಾಗರಾಜ ಪಾಟೀಲ ಅವರು, “ವಿಶ್ವ ಜನಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಮಾನವನಿಗೆ ವಾಸಿಸಲು ಸ್ಥಳ, ತಿನ್ನಲು ಆಹಾರವೇ ಸಿಕ್ಕುವಂತಿಲ್ಲ” ಎಂದು ತಿಳಿಸಿದರು.“ಈಗಿನ ವಿಶ್ವ ಜನಸಂಖ್ಯೆ 8.23 ಬಿಲಿಯನ್ ಆಗಿದ್ದು, ಭಾರತದ ಜನಸಂಖ್ಯೆ 146 ಕೋಟಿಯಷ್ಟಿದೆ. 2023 ರಿಂದ ಭಾರತವು ಚೀನಾವನ್ನು ಮೀರಿಸಿರುವುದು ಗಮನಾರ್ಹ. ಭಾರತ ಮತ್ತು ಚೀನಾ ಸೇರಿ ವಿಶ್ವದ ಸುಮಾರು 40% ಜನಸಂಖ್ಯೆಯನ್ನು ಹೊಂದಿವೆ” ಎಂದರು.

ನಂತರ ಚರ್ಚೆ ಹಾಗೂ ಪ್ರಶ್ನೋತ್ತರ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾ. ವಿನಾಯಕ ಸಾವಂತ, ದತ್ತು ಕಂಗ್ರಾಳಕರ, ಮಹೇಶ ಜಾಧವ್, ಗುರು ಗುಂಜಿಕರ್ ಹಾಗೂ ಹಲವಾರು ವಿದ್ಯಾರ್ಥಿಗಳು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಉಪಸ್ಥಿತರಿದ್ದರು.

Tags:

error: Content is protected !!