ಬರೀ ಟ್ರಾಂಪ್, ಮೋದಿ ಬಗ್ಗೆ ಮಾತನಾಡ್ತಾರೆ ಎಂಬ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ. ಭಾರತ ದೇಶ ಬಿಜೆಪಿ, ಕಾಂಗ್ರೆಸ್ ಗೆ ಸಂಬಂಧ ಪಟ್ಟದ್ದಲ್ಲ. ಟ್ರಂಪ್ ವಿಷಯ ನಾನು ಮಾತಾಡಿಲ್ಲ. ನಾನೇ ಯುದ್ಧ ನಿಲ್ಲಿಸಿದ್ದು ಅಂತ ಟ್ರಂಪ್ ಹೇಳಿದ್ರು ಮೈ ಫ್ರೆಂಡ್ ಅಂತ ಮೋದಿಗೆ ಹೇಳಿದ್ರು ಅಮೇರಿಕಾ ಪ್ರೆಸಿಡೆಂಟ್ ಟ್ರಂಪ್ ನಾನೇ ಯುದ್ಧ ನಿಲ್ಲಿಸಿದ್ದು ಅಂದ್ರು ನಮ್ಮ ಕೇಂದ್ರದ ಸಚಿವರು, ನಾಯಕರು ಅದಕ್ಕೆ ಉತ್ತರ ಕೊಡ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು ಬಿಜೆಪಿ ಅವರಿಗೆ ಒಂದು ಪ್ರಶ್ನೆನೂ ಕೇಳಬಾರದು .ಅವರು ಪ್ರಪಂಚದ ಎಲ್ಲಾ ನಾಯಕರ ಬಗ್ಗೆನೂ ಮಾತನಾಡಬಹುದು
ಮೋದಿ ಸಾಹೇಬ್ರ ಏನು ಮಾತು ಕೊಟ್ಟಿದ್ರು, ಅದರ ಬಗ್ಗೆ ಕೇಳ್ತಾ ಇದ್ದಿವಿ . ಕಳೆದ 10 ವರ್ಷದಲ್ಲಿ ಭಾರತ ಯಾವ ಡಿಪಾರ್ಟ್ಮೆಂಟ್ ನಲ್ಲಿ ಮುಂದೆ ಇದೆ? ಅಕ್ಷಯ ಕುಮಾರ್ ಗೆ ಕರೆತಂದು ಪ್ರಮೋಷನ್ ಮಾಡಿದ್ರು ಆತನಿಗೆ ಭಾರತದ ಪಾಸ್ಪೋರ್ಟ್ ಇಲ್ಲಾ, ಕೆನಡಾ ಪಾಸ್ಪೋರ್ಟ್ ಇದೆ
ಪಾಸ್ಪೋರ್ಟ್ ನಲ್ಲಿ 78 ನೇ ಸ್ಥಾನದಲ್ಲಿದ್ದ ಭಾರತ 140ನೇ ಸ್ಥಾನಕ್ಕೆ ಹೋಗಿದ್ದೀವಿ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೆ ಇದೆಯಾ..? ಶಶಿ ತರೂರ್ ಯಾಕೆ ಬೇಕಿತ್ತು ನಿಮಗೆ ಬಿಜೆಪಿಯಲ್ಲಿ ಇಂಗ್ಲಿಷ್ ಮಾತನಾಡೋಕೆ ಯಾರು ಇಲ್ವಾ? 193 ದೇಶದಲ್ಲಿ 183 ದೇಶಗಳು ಪಾಕಿಸ್ತಾನ್ ಪರವಾಗಿ ಮತ ಹಾಕಿವೆ. ನೇಪಾಳ ಹಿಂದೂ ರಾಷ್ಟ ಅವರು ಕೂಡ ಬೆಂಬಲ ನೀಡ್ತಿಲ್ಲ ಎಂದರು.
ನಾವೇನಾದ್ರೂ ಮಾಡ್ಕೋತೀವಿ, ಇವರಿಗೇನು? ಬಿಜೆಪಿ ನಾಯಕರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನೆ ಪ್ರಧಾನ ಮಂತ್ರಿ 90 ದೇಶಕ್ಕೆ ಹೋದಾಗ ಅವರೊಂದಿಗೆ ಯಾವ ಸಚಿವರು ಹೋಗೋದಿಲ್ಲ . ದೊಂಬರಾಟ ಏನು ಮಾಡಿದ್ದೇವೆ ನಾವು? ಆಡಳಿತದಲ್ಲಿ ಏನು ತಪ್ಪಾಗಿದೆ?
ನಮ್ಮ ಕರ್ನಾಟಕ ಜಿಡಿಪಿಯಲ್ಲಿ ದೇಶದಲ್ಲೇ ನಂಬರ್ 1 ಬಿಜೆಪಿ ಆಡಳಿತದ ಯಾವ ರಾಜ್ಯ ನಂಬರ್ 1 ಇದೆ? 2 ಕೋಟಿ ಮಕ್ಕಳು 5 ರಿಂದ 8 ನೇ ತರಗತಿ ಹೊರಗಡೆ ಇದ್ದಾರೆ. ಮಹಾರಾಷ್ಟ್ರದಲ್ಲಿ 843 ಹೆಣ್ಣುಮಕ್ಕಳು ಗರ್ಭಕೋಶ ನಾಶ ಮಾಡಿಕೊಂಡಿದ್ದಾರೆ.
ರಾಜಕಾರಣಿಗಳಿಗೆ, ಗಂಡು ಮಕ್ಕಳಿಗೆ ನಾಚಿಕೆ ಆಗಬೇಕು ದೇಶದ ಬಿಜೆಪಿ, ಕಾಂಗ್ರೆಸ್ ಗಂಡು ಮಕ್ಕಳಿಗೆ ನಾಚಿಕೆ ಆಗಬೇಕು ಎಂದರು. ಯಾರು ಇಲ್ಲಿ ಶಾಶ್ವತವಾಗಿ ಉಳಿಯೋದಿಲ್ಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇನ್ನು 50 ವರ್ಷ ಇರೋದಿಲ್ಲ ಈ ಪ್ರಪಂಚದಲ್ಲಿ ಎಂದರು. ತಮ್ಮ ಕರ್ಮಕಾಂಡ ಜನರಿಗೆ ಗೊತ್ತಾಗಬಾರದು ಅನ್ನೋ ಉದ್ದೇಶ ಅವರದು. ಕಳೆದ 11 ವರ್ಷದಿಂದ ದೇಶವನ್ನ ಬಿಜೆಪಿ ಕೊಳ್ಳೆ ಹೊಡೆದಿದೆ.ಮುನರಾಬಾದ ಪೋರ್ಟ್ ನಲ್ಲಿ ಸಿಕ್ಕ ಡ್ರಗ್ ಹಣ ಭಯೋತ್ಪಾದಕ ಚಟುವಟಿಕೆಗೆ ಬಳಕೆ ಆಗಿದೆ ಇದು ಇಂಪಾರ್ಟೆಂಟ್ ಪ್ರಶ್ನೆ ಅಲ್ವಾ?
1 ಲಕ್ಷದ 14 ಸಾವಿರ ಕೋಟಿ 500 ನೋಟು ನಕಲಿ ಇವೆ ಅಂತ ಆರ್ ಬಿ ಐ ರಿಪೋರ್ಟ್ ಹೇಳ್ತಿದೆ.ಹೊಸ ನೋಟು 26 ಸಾವಿರ ಕೋಟಿ 2000 ನೋಟಿದೆ ಮೋದಿ ಸಾಹೇಬ್ರೆ 2000 ನೋಟು ಎಲ್ಲಿ ಹೋಯ್ತು?.ಮಹಾತ್ಮಾ ಗಾಂಧೀ ಹಿಡಿದು ಯಾರಿಗೆ ಬೇಕಾದ್ರೂ ಬಿಜೆಪಿ ಅವರು ಬೈಯಬಹುದು ..ಇವರಿಗೆ ಮಾತ್ರ ಪ್ರಶ್ನೆ ಕೇಳಬಾರದು ಅಂದ್ರೆ ಹೇಗೆ ಎಂದರು.