ಅವರು ತಪ್ಪು ತಿಳಿದಿದ್ದಾರೆ ಅಷ್ಟೆ ಕಾಶಪ್ಪನವರ ಹಾಗೂ ನಾನು ಗುರು ಶಿಷ್ಯರು ಈಗ ಹಿರಿಯರು ಇಬ್ಬರನ್ನು ಕರೆದು ಎಲ್ಲ ಗೊಂದಲಗಳನ್ನು ಪರಿಹರಿಸುತ್ತಾರೆ ಕೂಡಲಸಂಗಮದ ಭಕ್ತರೊಂದಿಗೆ ಕಾಶಪ್ಪನವರ ಅವರು ಮಾತನಾಡಿದ್ದಾರೆ ಅವರ ಮಾತಿನಂತೆ ಕೂಡಲಸಂಗಮದ ಭಕ್ತರು ಕರೆಯಲು ಬಂದಿದ್ದಾರೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಯಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ
ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಮಾತನಾಡಿದ ಜಯಬಸವಜಯ ಮೃತ್ಯುಂಜಯ ಸ್ವಾಮೀಜಿ ಈ ಘಟನೆ ನನ್ನ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ ಸಭೆಯಲ್ಲಿ ಹೊಸ ಟ್ರಸ್ಟ್ ಮಾಡುವ ವಿಚಾರ ಸಭೆಯಲ್ಲಿ ಪ್ರಸ್ತಾಪಿಸಿಲ್ಲ ಇದೇ ಟ್ರಸ್ಟ್ ನಲ್ಲಿ ಎಲ್ಲ ತಾಲೂಕಿನ ಸದಸ್ಯರನ್ನ ಹಾಕಿಕೊಳ್ಳಿ ಎಂದು ಮುಖಂಡರು ಹೇಳಿದ್ದಾರೆ. ಅದನ್ನು ಹಿರಿಯರು ನಾವು ಸೇರಿ ಸರಿಪಡಿಸುತ್ತೇವೆ ಕರ್ನಾಟಕದ ಎಲ್ಲ ಮಠ ಮಾನ್ಯಗಳ ಟ್ರಸ್ಟ್ ಗೆ ಗುರುಗಳು (ಸ್ವಾಮೀಜಿ) ಅಧ್ಯಕ್ಷರಾಗಿರುತ್ತಾರೆ ಆದರೆ ನನ್ನ ವಿಶಾಲವಾದ ಭಾವನೆಯಿಂದ ಭಕ್ತರು ಅಧ್ಯಕ್ಷರಾಗಿರಲಿ ಅಂತಾ ಬಿಟ್ಟಿದ್ದೇ ತಪ್ಪಾಗಿದೆ. ನನಗೇನೂ ಆಸೆಯೇ ಇಲ್ಲ, ಆಸ್ತಿ, ಟ್ರಸ್ಟ್ ಹಿಡಿದುಕೊಂಡು ಅವರು ಸಂಪೂರ್ಣವಾಗಿ ಬೆಳೆಯಲಿ ಅವರ ಬೆಳವಣಿಗೆಯನ್ನು ನೋಡಿ ನಾನು ಖುಷಿ ಪಡುತ್ತೇನೆ ಮಠದಲ್ಲೇ ಇರುತ್ತೇನೆ ಮಠದ ಕಾರ್ಯಕ್ಷೇತ್ರ ವ್ಯಾಪ್ತಿ ಮುಖ್ಯಮಂತ್ರಿಗಳು ನನಗೆ ಆತ್ಮೀಯರು, ನಾನು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರ ಮನೆಯ ಎದುರು ಪ್ರತಿಭಟನೆ ಮಾಡಿದ್ದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿಲ್ಲ ಅಂತಾ ಹೇಳಿದ್ದೆ ಅದರಲ್ಲಿ ತಪ್ಪೇನಿದೆ ಸಿಎಂ ವಿರುದ್ಧ ಆ ಹೇಳಿಕೆ ಮತ್ತು ಹೋರಾಟವೇ ನನಗೆ ಇಷ್ಟೆಲ್ಲ ಆಗಲು ಬಹುದೊಡ್ಡ ಮುಳುವಾಯಿತು ಎಂದರು