ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮತ್ತು ನ್ಯಾಯಾಲಯ ಸಂಪರ್ಕಿಸುವ ಒಳ ಸೇತುವೆ ರಸ್ತೆಯಲ್ಲಿ ನೀರು ತುಂಬಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ, ಎಚ್‌ಇಆರ್‌ಎಫ್ ರೆಸ್ಕ್ಯೂ ತಂಡ ಸ್ಥಳಕ್ಕೆ ಧಾವಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ನಾಗರಿಕರು ಆ ಪ್ರದೇಶದತ್ತ ಹೋಗದಂತೆ ಕೋರಿದೆ.
ಜಿಲ್ಲಾಧಿಕಾರಿ ಕಚೇರಿ ಮತ್ತು ನ್ಯಾಯಾಲಯ ಸಂಪರ್ಕಿಸುವ ಒಳ ರಸ್ತೆ ನೀರಿನಲ್ಲಿ ಮುಳುಗಿರುವ ಬಗ್ಗೆ ಪುನ:ಪುನ: ಮಾಹಿತಿ ಲಭಿಸುತ್ತಿದ್ದ ಹಿನ್ನೆಲೆಯಲ್ಲಿ, ಎಚ್‌ಇಆರ್‌ಎಫ್ ರೆಸ್ಕ್ಯೂ ತಂಡ ಕೂಡಲೇ ಸ್ಥಳಕ್ಕೆ ದಾವಿಸಿದ ತಂಡಕ್ಕೆ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬುದು ಗೊತ್ತಾಗಿದೆ. ಸಂಗ್ರಹವಾಗಿರುವ ನೀರಿನಲ್ಲಿ ಮಕ್ಕಳು ಆಟವಾಡುವುದು ಅಥವಾ ಮದ್ಯಪಾನ ಮಾಡಿದವರು ಇಳಿಯುವುದು ಪ್ರಾಣಾಪಾಯಕಾರಿ ಆಗಬಹುದೆಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಆದೇಶಗಳ ನಿರೀಕ್ಷೆಯಿಲ್ಲದೇ, ಎಚ್‌ಇಆರ್‌ಎಫ್ ರೆಸ್ಕ್ಯೂ ತಂಡವು ಮಾನವೀಯ ದೃಷ್ಟಿಕೋನದಿಂದ ಮತ್ತು ತಮ್ಮ ಖರ್ಚಿನಲ್ಲಿಯೇ ಆ ಸ್ಥಳದಲ್ಲಿ ಸೆಫ್ಟಿ ಟೇಪ್ ಅಳವಡಿಸಿದೆ. ಇದರ ಮೂಲಕ ನಾಗರಿಕರು ಮತ್ತು ಮಕ್ಕಳು ಆ ಅಪಾಯದ ಪ್ರದೇಶದತ್ತ ಹೋಗದಂತೆ ತಡೆಯಲಾಗುತ್ತದೆ. ಇದರ ಪರಿಣಾಮವಾಗಿ, ಕೆಲವಷ್ಟು ಮಟ್ಟಿಗೆ ಜನರು ಅಲ್ಲಿ ಹೋಗುವುದನ್ನು ತಡೆಯಬಹುದು ಎಂಬ ನಂಬಿಕೆಯಿದೆ ಎಂದು ತಿಳಿಸಿರರುವ ಎಚ್‌ಇಆರ್‌ಎಫ್ ರೆಸ್ಕ್ಯೂ ತಂಡವು ದಯವಿಟ್ಟು ಆ ಪ್ರದೇಶದತ್ತ ಹೋಗಬೇಡಿ ಎಂದು ನಾಗರಿಕರಲ್ಲಿ ವಿನಂತಿ ಮಾಡಿಕೊಂಡಿದೆ ಜೊತೆಗೆ, ಆ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚುವಂತೆ ಆಡಳಿತ ತಕ್ಷಣ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಕೂಡ ತಂಡ ಮುಂದಿಟ್ಟಿದೆ.
ಸಾಧ್ಯವಿರುವ ಅಪಾಯವನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. “ಅಪಾಯ ಸಂಭವಿಸಿದ ನಂತರ ಓಡುವುದು ನಮ್ಮ ಕರ್ತವ್ಯವಲ್ಲ, ಅಪಾಯ ಸಂಭವಿಸುವ ಮುನ್ನವೇ ಅಗತ್ಯ ಎಚ್ಚರಿಕೆ ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಎಚ್‌ಇಆರ್‌ಎಫ್ ರೆಸ್ಕ್ಯೂ ತಂಡ ಹೇಳಿದೆ.