Bagalkot

ವೋಟ್ ಕೇಳೋಕೆ ಬರ್ತಾರೆ ಜನರ ಸಮಸ್ಯೆ ಕೇಳೋಕೆ ಬರಲ್ಲ…

Share

ಈ ಗ್ರಾಮದಲ್ಲಿನ ಟ್ಯಾಂಕುಗಳನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ. ಕಲುಷಿತ ನೀರು ಕುಡಿದ ಜನರು ಅನಾರೋಗ್ಯಕ್ಕಿಡಾಗುತ್ತಿದ್ದಾರೆ. ವೋಟ್ ಕೇಳಲು ಬರುವ ಜನಪ್ರತಿನಿಧಿಗಳು ಸಮಸ್ಯೆ ಕೇಳಲು ಬರಲ್ಲ ಎಂದು ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಕುರಿತು ಇಲ್ಲಿದೆ ಒಂದು ವರದಿ.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೋನಾಳ SB ಗ್ರಾಮ – ಗ್ರಾಮಸ್ಥರು ವರ್ಷಗಳಿಂದ ಕಲುಷಿತ ನೀರಿನಿಂದ ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗೆ ಪರಿಹಾರ ಕಲ್ಪಿಸದೆ ಪಂಚಾಯತ್ ಮತ್ತು ಪಿಡಿಓ ಅಧಿಕಾರಿಗಳು ಕಣ್ಮುಚ್ಚಿಕೊಂಡಿದ್ದಾರೆ. ಟ್ಯಾಂಕ್‌ಗಳಲ್ಲಿ ಪಾಚಿ, ಹುಳಗಳು ಕಂಡುಬರುತ್ತಿದ್ದು, ಕುಡಿಯುವ ನೀರಿಲ್ಲದೆ ಜನರು ಅನಾರೋಗ್ಯದ ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಶಾಲಾ ಮಕ್ಕಳಿಗೂ ಪಾಚಿಗಟ್ಟಿದ ನೀರಿನ ಟ್ಯಾಂಕರ್ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತಿದ್ದು,ಪರಿಣಾಮವಾಗಿ ಹಲವು ಮಕ್ಕಳು ವಾಂತಿ, ಜ್ವರದಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಗ್ರಾಮಸ್ಥರು ಸರ್ಕಾರದ ಅನುದಾನ ಯೋಜನೆಗಳ ύಪಯೋಗ ಸಿಗದೆ ವಂಚಿತರಾಗಿದ್ದಾರೆ.
ಟ್ಯಾಂಕ್ ಕ್ಲೀನ್ ಮಾಡುವವರಿಗೆ ಸಂಬಳ ಕೊಡುತ್ತಿಲ್ಲವಂತೆ. “ಸಂಬಳ ಕೊಟ್ಟರೇ ಮಾತ್ರ ಟ್ಯಾಂಕ್ ಸ್ವಚ್ಛ ಮಾಡ್ತೀವಿ” ಎಂಬ ಮಾತು ಕೇಳಿಬರುತ್ತಿವೆ. ಚುನಾವಣೆ ಸಮಯದಲ್ಲಿ ವೋಟು ಕೇಳಲು ಬರುವ ಜನಪ್ರತಿನಿಧಿಗಳು, ಜನರ ಸಮಸ್ಯೆ ಕೇಳಲು ಬರುವುದಿಲ್ಲ. ಇದು ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರದ ದುರ್ಲಕ್ಷ್ಯವನ್ನು ತೋರಿಸುತ್ತದೆ. ಇಲ್ಲಿನ ನೀರು ಕುಡಿದರೇ ಅನಾರೋಗ್ಯ ಕಾಡುತ್ತಿದ್ದು, ಬೇರೆಡೆ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ.
ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಸಮಸ್ಯೆಯನ್ನು ನೀಗಿಸಲು ಗಮನಹರಿಸಬೇಕಿದೆ.

Tags:

error: Content is protected !!