BELAGAVI

ಜುಲೈ 14 ರಿಂದ ಟೈಪಿಂಗ್ ಮತ್ತು ಶಾರ್ಟ್‌ಹ್ಯಾಂಡ್ ಪರೀಕ್ಷೆಗಳು ಆರಂಭ…

Share

ಜುಲೈ 14 ರಿಂದ ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳು ಆರಂಭಗೊಳ್ಳಿವೆ ಎಂದು ಬೆಳಗಾವಿ ಸುನೀತಾ ವಾಣಿಜ್ಯ ಬೆರಳಚ್ಚು ವಿದ್ಯಾಲಯವು ತಿಳಿಸಿದೆ. ಕರ್ನಾಟಕ ಸರ್ಕಾರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB), ಮಲ್ಲೇಶ್ವರಂ, ಬೆಂಗಳೂರಿನ ವತಿಯಿಂದ ಜುಲೈ 2025 ರಂದು ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳನ್ನು ಜುಲೈ 14, 2025 ರಿಂದ ಆರಂಭಗೊಳ್ಳಲಿವೆ. ಈಗಾಗಲೇ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಜೊತೆ ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೆಳಗಾವಿಯ ಸರ್ಕಾರಿ ಸರ್ದಾರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆಗಳು ನಡೆಯಲಿವೆ. ಈ ಕುರಿತು ಬೆಳಗಾವಿಯ ಖಡೇ ಬಝಾರ್’ನಲ್ಲಿರುವ ಸುನೀತಾ ವಾಣಿಜ್ಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯನ್ನು ನೀಡಿದ್ದು, ತಮ್ಮ ವಿದ್ಯಾಲಯದಿಂದ ನೋಂದಾಯಿಸಿರುವ ಎಲ್ಲ ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕೆಂದು ತಿಳಿಸಿದ್ದಾರೆ.

Tags:

error: Content is protected !!