ಖಾನಾಪೂರ ತಾಲೂಕಿನ ಬೇಕವಾಡ -ಬಂಕಿ-ಹಡಲಗಾ ರಸ್ತೆಯ ರಸ್ತೆ ಮದ್ಯೆ ಇರುವ ಕೆರೆಯಲ್ಲಿ ಬಲಿಷ್ಠವಾದ ಎರಡು ಜೋಡಿ ಎತ್ತುಗಳು ಮುಳುಗಿ ಸಾವು ಗೊಂಡ ಘಟನೆ ನಡೆದಿದೆ ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಎತ್ತುಗಳು ಸಾವನ್ನಪ್ಪಿದ ಘಟನೆಯಿಂದ ರೈತ ಕಂಗಾಲಾಗಿದ್ದಾನೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿದೆನೆಂದರೆ ರೈತ ಗುಂಜು ವಿಠ್ಠಲ ಪಾಟೀಲ ಎಂಬ ರೈತ ಹೊಲದಲ್ಲಿ ಕೆಲಸ ಮಾಡಿಕೊಂಡು ಬರುವಾಗ ಈ ಕೆರೆಯಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದಾನೆ ಇತ್ತಿಚೆಗೆ ಅಷ್ಟೇ ಎನ್ ಆರ್ ಇ ಜಿ ಯಿಂದ ಕೆರೆ ಹೊಳ್ಳೆತ್ತುವ ಕಾರ್ಯ ಬೇಕವಾಡ ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಗಿತ್ತು ಮಳೆಯ ಅಬ್ಬರಕ್ಕೆ ಕೆರೆಯಲ್ಲಿ ನೀರು ತುಂಬಿದೆ ಎತ್ತುಗಳಿಗೆ ನೀರಿನ ಅಂದಾಜು ಆಳು ತಿಳಿಯದೆ ಇರುವುದರಿಂದ ನೀರಿನಲ್ಲಿ ಉಸಿರುಗಟ್ಟಿ ಎತ್ತುಗಳು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ