Kagawad

ಕಾಗವಾಡ ಮತಕ್ಷೇತ್ರದ ಮದವಾವಿ ದೊಡ್ಡ ಕೆರೆಗೆ ಉಭಯ ಶಾಸಕರಿಂದ ಬಾಗಿನ ಅರ್ಪಣೆ.

Share

ದೇಶದ ಸ್ವಾತಂತ್ರ್ಯ ನಂತರ ಕಳೆದ 70 ವರ್ಷಗಳಿಂದ ಕಾಗವಾಡ ಮತ ಕ್ಷೇತ್ರದ ಪೂರ್ವ ಭಾಗದ ಜನರಿಗೆ ಕೃಷ್ಣಾ ನದಿ ನೀರು ಹರಿಸಿರಿ ಎಂಬ ಬೇಡಿಕೆ ಇತ್ತು.
ಸುಮಾರು 1300 ಮೂರು ಕೋಟಿ ವೆತ್ತು ಮಾಡಿ ಶ್ರೀ ಬಸವೇಶ್ವರ ಏತ ನೀರಾವರಿ ನೀರು ಬರಡ ಭೂಮಿಗೆ ಹರಿಸಲಾಗಿದೆ.  ಇದರ ಶ್ರೇಯಸ ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಹಾಗೂ ಅಥಣಿ ಶಾಸಕರು ಮಾಜಿ ಡಿಸಿಎಂ ಲಕ್ಷ್ಮಣ್ ಸೌದಿ ಇವರ ಇಬ್ಬರಗೆ ಸಲ್ಲಿಸುತ್ತದೆ.

ಇದನ್ನು ಗಮನದಲ್ಲಿ ತೆಗೆದುಕೊಂಡು ಕಾಗವಾಡ ಕ್ಷೇತ್ರದ ಮತಭಾವಿ ಗ್ರಾಮದ ಎಲ್ಲ ರೈತ ಮುಖಂಡರು ಮಹಿಳೆಯರು ಒಂದುಗೂಡಿ ಡೂಳ್ಳ ವಾದ್ಯದೊಂದಿಗೆ ಆರತಿ ಮುಖಾಂತರ ಉಭಯ ಶಾಸಕರನ್ನು ಮಧಾವಿ ಕೆರೆಯವರಿಗೆ ಬರಮಾಡಿಕೊಂಡು ಅವರಿಂದ ಕೆರೆ ನೀರಿಗೆ ಬಾಗಿನ ಅರ್ಪಿಸಲಾಯಿತು.  ಈ ಕ್ಷಣ ಇಲ್ಲಿ ರೈತರ ಹರ್ಷ ಉಲ್ಲಾಸ ತುಂಬಿ ತುಳುಕುತ್ತಿತ್ತು. ನಮ್ಮ ಭಾಗಕ್ಕೆ ಉಭಯ ಶಾಸಕರು ಭಗೀರಥ ಆಗಿದ್ದಾರೆ ಎಂಬ ಘೋಷಣೆ ರೈತರು ನೀಡುತ್ತಿದ್ದರು.
ರೈತರ ಸಂತೋಷದಲ್ಲಿ ಭಾಗಿಯಾದ ಉಭಯ ಶಾಸಕರು ನೀರು ಹಾಗೂ ಕೆಸರಿನಲ್ಲಿ ಹೋಗಿ ಬಾಗಿನ್ ಅರ್ಪಣೆ ಮಾಡಿದರು.

ಬಾಗಿನ ಅರ್ಪಣೆ ಮಾಡಿದ ಬಳಿಕ ರೈತರನ್ನು ಉದ್ದೇಶಿಸಿ ಮಾಜಿ ಬಿಸಿಎಂ ಲಕ್ಷ್ಮಣ್ ಸೌದಿ ಮಾತನಾಡಿ
ಖಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಂದ ಉದ್ಘಾಟಿಸುವುದಾಗಿ ಶಾಸಕ ಲಕ್ಷಣ ಸವದಿ ಹೇಳಿದರು.

ಮದಭಾವಿ ಗ್ರಾಮದ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಖಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಕಾಲುವೆಗಳಿಗೆ ನೀರು ಹರಿದ ಪರಿಣಾಮ ಮದಭಾವಿಯ ದೊಡ್ಡ ಕೆರೆ ತುಂಬಿ ಹರಿಯುತ್ತಿದೆ. ಈ ಯೋಜನೆಯ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡು ಕಾಗವಾಡ ಮತಕ್ಷೇತ್ರದ ಕಟ್ಟ ಕಡೆಯ ಗ್ರಾಮಕ್ಕೆ ಕಾಲುವೆ ಮೂಲಕ ನೀರು ತಲಪುವುದು ಎಂದರು.

ಈ ಯೋಜನೆಯ ಕಾಮಗಾರಿ ಪ್ರಾರಂಭಗೊಳಿಸಬೇಕೆಂದು ಆಗ್ರಹಿಸಿ ನಾವು ಉಪವಾಸ ಸತ್ಯಾಗೃಹ ಕೈಗೊಂಡ ಪರಿಣಾಮ 2017ರಲ್ಲಿ ಅಂದಿನ ಮುಖ್ಯಮಂತ್ರಿ ಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮುಂದೆ ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಈ ಯೋಜನೆಗೆ ನೀರಿನ ಹಂಚಿಕೆ ಕೂಡ ಆಯಿತು. ಆದರೆ ಗುತ್ತಿಗೆದಾರನ ಆರ್ಥಿಕ ಅಡಚಣೆಯ ಪರಿಣಾಮ ಈ ಯೋಜನೆಗೆ ಹಿನ್ನಡೆಯಾಯಿತು ಎಂದು ಹೇಳಿದರು.
ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಖಿಳೇಗಾಂವ
ಬಸವೇಶ್ವರ ಯೋಜನೆ ಅನುಷ್ಠಾನಗೊಳಿಸಬೇಕು ಎನ್ನುವುದು ನನ್ನ ಸಂಕಲ್ಪ ಆಗಿತ್ತು. ಆದರೆ ಈ ಯೋಜನೆಯ ಅನುಷ್ಠಾನದಲ್ಲಿ ಅನೇಕ ಅಡೆತಡೆಗಳು ಬಂದ ಪರಿಣಾಮ ವಿಳಂಬವಾಯಿತು ಎಂದು ಹೇಳಿದರು.  ಮದಭಾವಿ ಗ್ರಾಮದ ದೊಡ್ಡ ಕೆರೆಗೆ ಬಾಗಿನ ಅರ್ಪಿಸಲಾಯಿತು. ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ನೀರಾವರಿ ಇಲಾಖೆಯ ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನಾಯಕ ಬಾಗಡಿ, ಮದಭಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಕೋರೆ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.

ಈ ಯೋಜನೆಯ ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಅನೇಕ ಅಡಚಣೆಗಳಿದ್ದು ಅವುಗಳನ್ನು ನಿವಾರಿಸಬೇಕಿದೆ. ಇದಕ್ಕಾಗಿ ಈ ಭಾಗದ ರೈತರು ಸಹಕಾರ ನೀಡಲೇಬೇಕು ಆಗ ಮಾತ್ರ ಈ ಯೋಜನೆಯ  ಎರಡನೇ ಹಂತ ಪೂರ್ಣಗೊಳ್ಳುವುದು. ಅನೇಕ ರೈತರು ತಾವು ಬೆಳೆದ ಬೆಳೆ ತೆರವುಗೊಳಿಸಿ ಕಾಲುವೆಗಳ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟರು ಎಂದ ಅವರು ರೈತರ ಹೋರಾಟ, ತ್ಯಾಗದ ಪರಿಣಾಮ ಈ ಯೋಜನೆ ಮೊದಲ ಹಂತ ಪೂರ್ಣಗೊಂಡಿದೆ.

ಸಮಾರಂಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ಮುಖಂಡರಾದ ವಿನಾಯಕ ಬಾಗಡಿ, ಮಹಾದೇವ ಕೋರೆ, ` ನಿಜಗುಣಿ ಮಗದುಮ್. ಅಪ್ಪಾಸಾಹೇಬ ಚೌಗಲಾ, ಶಿವಾನಂದ ಮಗದುಮ್, ಅಶೋಕ ಪೂಜಾರಿ, ಕೆ.ಆರ್. ಪಾಟೀಲ, ಇವರನ್ನು ಉಭಯ ಶಾಸಕರಿಂದ ಸನ್ಮಾನಿಸಲಾಯಿತು.

Tags:

error: Content is protected !!