Vijaypura

ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ, ಪೊಲೀಸರು ರಂಗೋಲಿ ಕೆಳಗೆ ನುಗ್ಗಿ ಬಗ್ಗು ಬಡಿತಾರೆ; ರಾಜ್ಯವನ್ನೆ ಬೆಚ್ಚಿಬಿಳಿಸಿದ ಪ್ರಕರಣ ಬೇಧಿಸಿದ ಪೊಲೀಸರು

Share

ಆ ಕಳ್ಳತನ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬಿಳಿಸಿತ್ತು. ವಾಮಾಚಾರ ನಡೆಸಿ ಕಳ್ಳತನ ಮಾಡಲಾಗಿದೆ ಎಂಬಂತೆ ಬಿಂಬಿಸಿ ಕಳ್ಳತನ ನಡೆದಿತ್ತು. ಬರೊಬ್ಬರಿ 53 ಕೆಜಿ ಚಿನ್ನವನ್ನು ಕಳ್ಳತನ ಮಾಡಲಾಗಿತ್ತು. ಒಂದೇ ಒಂದು ಸಾಕ್ಷಿಯನ್ನು ಕಳ್ಳರು ಬಿಟ್ಟಿರಲಿಲ್ಲಾ. ಅಲ್ಲದೆ ಕಳ್ಳತನಕ್ಕೆ ಸರ್ಕಾರಿ ವಾಹನ, ವಾಕಿಟಾಕಿಯಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಳ್ಳತನ ಮಾಡಿದ್ದರು. ಚಾಲೆಂಜ್ ಆಗಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಮಾಡಿದ ಕಿತಾಪತಿಯಿಂದ ಬರೊಬ್ಬರಿ 15 ಮಂದಿ ಜೈಲುಪಾಲಾಗಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಹೌದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿಯ ರಾಷ್ಟ್ರೀಕೃತ ಬ್ಯಾಂಕ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪೊಲೀಸರು ಮತ್ತೆ 12 ಜನರನ್ನು ಬಂಧಿಸಿದ್ದಾರೆ. ಮನಗೂಳಿ ಪಟ್ಟಣದ ಬ್ಯಾಂಕ್‌ನಲ್ಲಿ ಕಳೆದ ಮೇ 23 ರಂದು ಸೇಫರ್ ಲಾಕ್ ಮುರಿದು ಕಳ್ಳತನ ಮಾಡಲಾಗಿತ್ತು. ಘಟನೆಯಲ್ಲಿ ಅಂದಾಜು 53.26 ಕೋಟಿ ರೂಪಾಯಿ ಮೌಲ್ಯದ 58.97 ಕೆಜಿ ಚಿನ್ನಾಭರಣ ಹಾಗೂ ನಗದು ಕಳುವಾಗಿತ್ತು. ಪ್ರಕರಣ ಬೆನ್ನಟ್ಟಿದ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ 10.75 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಕ್ಕೆ ಪಡೆದಿದ್ದರು. ಅವರ ವಿಚಾರಣೆ ನಡೆಸಿ ಇದೀಗ ಮತ್ತೆ 12 ಜನರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ಮೂಲದ ಬಾಲರಾಜ್ ಮಣಿಕಮ್ ಯರೆಕುಲಾ, ಚಂದನರಾಜ್ ಪಿಳ್ಳೈ, ಗುಂಡು ಜೋಸೆಫ್ ಶ್ಯಾಮಬಾಬು, ಪೀಟರ್ ಚಂದ್ರಪಾಲ್, ಇಜಾಜ್ ಧಾರವಾಡ, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ್, ಮಹಮ್ಮದ್ ಆಸೀಫ್ ಕಲ್ಲೂರ, ಅನಿಲ್ ಮಿರಿಯಾಲ್, ಮೋಹನಕುಮಾರ, ಸುಲೇಮನ್‌ವೇಸ್ಲಿ ಪಲುಕುರಿ, ಮರಿಯಾದಾಸ ಗೋನಾ ಬಂಧಿತ ಆರೋಪಿಗಳು. ಇದೀಗ್ ಬಂಧಿತ ಆರೋಪಿಗಳಿಂದ 39 ಕೆಜಿ ಗಟ್ಟಿ ಬಂಗಾರ, 1.16 ಕೋಟಿ ನಗದು, ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ 39.26 ಕೋಟಿ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇನ್ನೂ ಕೃತ್ಯಕ್ಕೆ ಬಳಸಿದ ಕೃತ್ಯಕ್ಕೆ ಬಳಸಿದ ಐದು ಐಷಾರಾಮಿ ಕಾರುಗಳು, ರೈಲ್ವೆ ಇಲಾಖೆಯ ಟಾಟಾ ಕಂಪನಿಯ ಒಂದು ಲಾರಿ ಹಾಗೂ ಬ್ಯಾಂಕ್‌ನ ಸೇಫ್ ಲಾಕರ್ ತೆರೆಯಲು ಬಳಸಿದ ನಕಲಿ ಕೀಲಿ ಕೈಗಳು, ನಕಲಿ ಕೀಲಿಕೈ ತಯಾರಿಸಲು ಬಳಸಿದ ಸಲಕರಣೆಗಳು, ಹೆಕ್ಸಾ ಬೇಡ್‌ಗಳು ಮತ್ತು ಬಂಗಾರ ಕರಗಿಸಲು ಬಳಸಿದ 2 ಗ್ಯಾಸ್‌ ಸಿಲಿಂಡರ್, 1 ಆಕ್ಸಿಜನ್ ಸಿಲಿಂಡ‌ರ್, ಬರ್ನಿಂಗ್ ಗನ್, ಸ್ಪ್ಯಾನರ್, ನಾಲ್ಕು ವಾಕಿಟಾಕಿ ಹಾಗೂ ಒಂದು ಪಿಸ್ತೂಲ್ ನಂತಿರುವ ಸಿಗರೇಟ್ ಲೈಟರ್ ವಶಕ್ಕೆ ಪಡೆಯಲಾಗಿದೆ. ಈವರೆಗೆ ಒಟ್ಟು 15 ಆರೋಪಿಗಳನ್ನು ಬಂಧಿಸಿ 39 ಕೆಜಿ ಬಂಗಾರದ ಗಟ್ಟಿ ಹಾಗೂ ಆಭರಣಗಳನ್ನು ಮತ್ತು 1.16 ಕೋಟಿ ನಗದು, ಕೃತ್ಯಕ್ಕೆ ಬಳಸಿದ ವಾಹನ ಸೇರಿ ಒಟ್ಟು 39.26 ಕೋಟಿ ರೂ.ಗಳಿಗಿಂತಲೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಶೇ. 85 ರಷ್ಟು ಸಾಮಗ್ರಿ ಹಾಗೂ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಎರಡ್ಮೂರು ಆರೋಪಿಗಳಿದ್ದು ಬಂಧಿಸಲು ಜಾಲ ಬೀಸಲಾಗಿದೆ.

ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ತನಿಖಾ ತಂಡದ ಕಾರ್ಯ ಶ್ಲಾಘಿಸಿದ್ದಾರಲ್ಲದೇ ಸೂಕ್ತ ಬಹುಮಾನ ವಿತರಿಸಿದರು. ಎಎಸ್‌ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಟಿ.ಎಸ್‌. ಸುಬ್ಬಿ, ಸುನೀಲ ಕಾಂಬಳೆ, ತನಿಖಾಧಿಕಾರಿ ರಮೇಶ ಅವಜಿ ಮತ್ತಿತರರು ಇದ್ದರು. ಈ ಪ್ರಕರಣದಲ್ಲಿ ವಿದ್ಯಾವಂತರು ಕಳ್ಳತನ ನಡೆಸಿದ್ದು ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದಾರೆ. ಪೊಲೀಸರು ಅವರ ಹೆಡೆಮುರಿ ಕಟ್ಟಿ ಅಂದರ್ ಮಾಡಿದ್ದಾರೆ. ಒಟ್ನಲ್ಲಿ ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ, ಪೊಲೀಸರು ರಂಗೋಲಿ ಕೆಳಗೆ ನುಗ್ಗಿಯಾದ್ರೂ ಬಗ್ಗು ಬಡಿತಾರೆ ಎನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!