ಐತಿಹಾಸಿಕ ವಿಜಯಪುರ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲೆಗೆ ತೆರಳುವ ಚಿಕ್ಕ ಮಕ್ಕಳಿಗೆ ಬೀದಿ ನಾಯಿಗಳ ಕಾಟದಿಂದ ಆತಂಕ ಮನೆ ಮಾಡಿತ್ತು. ಅದರಲ್ಲೂ ನಸುಕಿನ ಜಾವ ವಾಕಿಂಗ್ ಹೋಗುವವರ ಮೇಲೆ ನಾಯಿಗಳು ಅಟ್ಯಾಕ್ ಮಾಡುತ್ತಿದ್ದವು. ಈ ಕುರಿತು ಇನ್ ನ್ಯೂಜ್ ಶನಿವಾರದ ವಾರ್ತೆಗಳಲ್ಲಿ ನಾಯಿಗಳ ಹಾವಳಿಗೆ ಆತಂಕದಲ್ಲೇ ಶಾಲೆಗೆ ತೆರಳುವ ವಿದ್ಯಾರ್ಥಿಗಳು: ವಿಜಯಪುರ ನಗರದ ವಾರ್ಡ್ ನಂ.3 ರಲ್ಲಿ ಮಿತಿಮೀರಿದ ಬೀದಿ ಶ್ವಾನಗಳ ಹಾವಳಿ ಎಂಬ ಶೀರ್ಷಿಕೆಯಡಿ ವರದಿ ಪ್ರಸಾರ ಮಾಡಿತ್ತು. ಈ ವರದಿ ಬೆನ್ನಲ್ಲೇ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಆಪರೇಷನ್ ಡಾಗ್ ಶುರು ಮಾಡಿದೆ ಈ ಕುರಿತು ಇಲ್ಲಿದೆ ಡಿಟೇಲ್ಸ್…
ವಿಜಯಪುರ ನಗರದಲ್ಲಿ ಇದೀಗ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ತಡವಾಗಿ ಬರುವ ಬೈಕ್ ಸವಾರರ ಬೈಕ್ ಹಿಂದೆ ಬೆನ್ನಟ್ಟಿ ಬೈಕ್ ಸವಾರರಿಗೆ ಕಾಟ ಕೊಡುತ್ತಿದ್ದವು. ಅದೆಷ್ಟೋ ಸವಾರರು ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ. ಇನ್ನೂ ಮೀತಿ ಮೀರಿದ ಬೀದಿ ನಾಯಿಗಳ ಹಾವಳಿಯಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಆತಂಕದಲ್ಲೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರಿ ಶಾಲೆಯ ಹಾಗೂ ಅಂಗನವಾಡಿ ವಿದ್ಯಾರ್ಥಿಗಳಿಗೆ ಬೀದಿ ನಾಯಿಗಳ ಕಾಟ ಎದುರಾಗುತ್ತಿರುವ ಘಟನೆ ವಿಜಯಪುರ ನಗರದ ವಾರ್ಡ್ ನಂ.3 ರ ಗ್ಯಾಂಗ್ ಬೌಡಿ ಪ್ರದೇಶದ ಭಾವಸಾರ ನಗರದಲ್ಲಿ ನಡೆಯುತ್ತಿತ್ತು. ಪ್ರತಿದಿನವೂ ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಬೀದಿ ನಾಯಿಗಳ ಕಾಟದಿಂದ ಬೇಸತ್ತಿದ್ದರು. ಈ ಕುರಿತು ಇನ್ ನ್ಯೂಜ್ ಶನಿವಾರದ ವಾರ್ತೆಗಳಲ್ಲಿ ವರದಿ ಪ್ರಸಾರ ಮಾಡಿತ್ತು. ಪೋಷಕರು ಯಾವ ಹೊತ್ತಿನಲ್ಲಾದ್ರೂ ದಾಳಿ ಮಾಡಿಯಾವು ಎಂಬ ಹೆದರಿಕೆಯಲ್ಲೇ ಶಾಲೆಗೆ ಕಳುಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ಶಿಕ್ಷಕರು, ಅಡುಗೆ ಸಿಬ್ಬಂದಿಗೂ ಆತಂಕ ಎದುರಾಗಿತ್ತು.
ವಿಜಯಪುರ ನಗರದ ಗ್ಯಾಂಗ್ ಬೌಡಿ ಪ್ರದೇಶದ ಶಾಲೆ 32 ರ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳಿಯರಿಗೆ ನಾಯಿಗಳ ಆತಂಕ ನಿತ್ಯ ತಪ್ಪದ್ದಾಗಿದೆ. ವಾರ್ಡ್ ನಂ.3 ರ ಭಾವಸಾರ ನಗರದಲ್ಲಿ ಬೀದಿ ನಾಯಿಗಳು ಹಾವಳಿ ಹೆಚ್ಚಾಗಿದ್ದು ಬೀದಿ ನಾಯಿಗಳು ಮನೆಯ ಮುಂದೆ ನಿಲ್ಲಿಸಿದ ವಾಹನಗಳ ಸೀಟು ಹರಿದು ಹಾಕುತ್ತಿವೆ. ರಾತ್ರಿ ಹೊತ್ತು ದ್ವಿಚಕ್ರ ವಾಹನಗಳ ಚಾಲಕರ ಬೆನ್ನು ಹತ್ತಿ ಕಚ್ಚುತ್ತಿವೆ. ಕಾರಣ ಬೀದಿ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲಾ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇನ್ ನ್ಯೂಜ್ ವರದಿಗೆ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು ರವಿವಾರ ಬೆಳಿಗ್ಗೆ ಯಿಂದ ಬೀದಿ ನಾಯಿಗಳನ್ನು ಹಿಡಿಯುತ್ತಿದ್ದಾರೆ. ಇನ್ನೂ ಈ ಕುರಿತು ವರದಿ ಪ್ರಸಾರ ಮಾಡಿದ ಇನ್ ನ್ಯೂಜ್ ಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಒಟ್ನಲ್ಲಿ ಇನ್ ನ್ಯೂಜ್ ವರದಿಯಿಂದ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಆಪರೇಷನ್ ಶುರು ಮಾಡಿದೆ. ಐತಿಹಾಸಿಕ ನಗರದಲ್ಲಿ ಹೆಚ್ಚಾಗುತ್ತಿರುವ ಬೀದಿನಾಯಿಗಳ ಹಾವಳಿ ತಡೆಯಲು ಏನೆಲ್ಲಾ ಕ್ರಮ ವಹಿಸಬೇಕೋ ಆ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ನಾಯಿಗಳ ಹಾವಳಿ ತಡೆಯಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.