ಸಣ್ಣ ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ವಿಚಾರವಾಗಿ ಜನರು ಬರೀ ವಾಣಿಜ್ಯ ತೆರಿಗೆ ಬಗ್ಗೆ ಅಷ್ಟೆ ಮಾತಾಡ್ತಿದ್ದಾರಾ? ಜಿಎಸ್ಟಿ ಬಗ್ಗೆ ಮಾತಾಡ್ತಿಲ್ವಾ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದ್ದಾರೆ.
ಸಣ್ಣ ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ವಿಚಾರವಾಗಿ ಜನರು ಬರೀ ವಾಣಿಜ್ಯ ತೆರಿಗೆ ಬಗ್ಗೆ ಅಷ್ಟೆ ಮಾತಾಡ್ತಿದ್ದಾರಾ? ಜಿಎಸ್ಟಿ ಬಗ್ಗೆ ಮಾತಾಡ್ತಿಲ್ವಾ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದ ಅವರು ಈ ಕುರಿತು ಸಿಎಂ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ರಾಜ್ಯದಿಂದ ಎಷ್ಟು ತೊಂದರೆ ಆಗುತ್ತದೆ. ಕೇಂದ್ರದಿಂದ ಎಷ್ಟು ತೊಂದರೆ ಆಗುತ್ತಿದೆ. ಸಂಪೂರ್ಣ ಮಾಹಿತಿ ಸಿಗುತ್ತದೆ. ಮಾತಾಡುವಂತಿದ್ದರೆ ಸಂಪೂರ್ಣವಾಗಿ ಮಾತಾಡೋಣ ಎಂದರು.
ಇನ್ನು ಬಾಗಲಕೋಟೆ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಸೇರಬೇಕಿದ್ದ 8 ಕೋಟಿ ರೂ. ವಂಚನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರಕರಣದ ಬಗ್ಗೆ ನಾನೇ ಸುಮೋಟೋ ಲೆಟರ್ ಬರೆದಿದ್ದೇನೆ. ಯಾರೇ ತಪ್ಪಿತಸ್ಥರು ಇದ್ದರೂ ಬಿಡಲ್ಲ. ಸ್ವಲ್ಪ ವಿಳಂಬವಾಗಿದೆ ನಿಜ. ಮುಂದಿನ ದಿನಗಳಲ್ಲಿ ತನಿಖೆಯನ್ನು ಚುರುಕುಗೊಳಿಸುತ್ತೇವೆ. ನಾನು ಸಚಿವನಾಗಿ ತನಿಖೆಯಲ್ಲಿ ಇನ್ವಾಲ್ ಆಗಬಾರದು. ತನಿಖೆ ಶುರುವಾದ ಬಳಿಕ ನಾವು ತಕ್ಷಣವೇ ನಿರೀಕ್ಷೆ ಮಾಡಬಾರದು. ಇಲಾಖೆ ಕಾರ್ಯದರ್ಶಿ ಜೊತೆ ಮಾತನಾಡಿ ಪ್ರಕರಣ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ಕಾರ್ಮಿಕರಿಗೆ ಇದ್ದ ಉಚಿತ ಬಸ್ ಪಾಸ್ ಬಂದ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದನ್ನು ಮಾಡವುದು ಬಹಳ ಕಷ್ಟ. ಕಾರ್ಮಿಕರು ಅಂದ ಕೂಡಲೇ ಬಹಳ ಬೈಪರ್ಕೇಶನ್ ಇದೆ. ನೀವು ಕೂಡ ಕಾರ್ಮಿಕರೇ ನಾನು ಕೂಡ ಕಾರ್ಮಿಕನೇ.ಇವು ಪ್ರತ್ಯೇಕ ಮಾಡಬೇಕು. ಅಸಂಘಟಿತ, ಕಟ್ಟಡ ಕಾರ್ಮಿಕರು, ಟ್ರಾನ್ಸಪೋರ್ಟ್ ಸೆಕ್ಟರ್ ಎಂದು ಪ್ರತ್ಯೇಕ ಆಗಬೇಕು. ಶೇ.90 ರಷ್ಟು ಜನರು ಅಸಂಘಟಿತರು ಇದ್ದಾರೆ. ಅವರು ಸಹ ಕಾರ್ಮಿಕರು ಆಗಿರುತ್ತಾರೆ. ಕಟ್ಟಡ ಕಾರ್ಮಿಕರಿಂದ ಸೆಸ್ ಕಲೆಕ್ಟ್ ಮಾಡಿರುತ್ತೇವೆ. ಅವರಿಗೆ ಅನೇಕ ಸೌಲಭ್ಯಗಳು ಇವೆ. ನಮ್ಮ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಬಸ್ ಪಾಸ್ ಸೌಲಭ್ಯ ಕಷ್ಟ ಆಗುತ್ತಿದೆ. ಹೀಗಾಗಿ ನಮ್ಮ ಹತ್ತಿರ ದುಡ್ಡಿಲ್ಲ ಎಂದರು.
ಧರ್ಮಸ್ಥಳದಲ್ಲಿ ಶವ ಹೂತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ನೇಮಕ ಆಗಿದೆ. ಸದ್ಯ ತನಿಖೆ ನಡೆಯುತ್ತಿದೆ, ಅದರ ಬಗ್ಗೆ ಮಾತನಾಡುವುದು ಸರಿ ಇರಲ್ಲ ಎಂದರು.