ಬೆಳಗಾವಿ: ಜೀವನದಲ್ಲಿ ನಾವು ಸಾಧನೆ ಮಾಡಿ, ಸೌಕರ್ಯಗಳನ್ನು ಸುಲಭವಾಗಿ ಪಡೆಯಲು ಮೂಲ ಕಾರಣವಾದ ಗುರು ಪರಂಪರೆಯ ಕೊಡುಗೆ ಅಪಾರವಾದುದು ಎಂದು ಪರಮಪೂಜ್ಯ ಶ್ರೀ ಚಿತ್ ಪ್ರಕಾಶ ಆನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ನಗರದ ತಿಲಕವಾಡಿಯ ಶಾಂತಿನಗರದಲ್ಲಿರುವ ಆರ್ಷ ವಿದ್ಯಾಶ್ರಮದಲ್ಲಿ ಕ್ರಾಂತಿ ಮಹಿಳಾ ಮಂಡಲ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ “ಗುರು ವಂದನಾ” ಕಾರ್ಯಕ್ರಮ ಉದ್ಘಾಟಿಸಿ, ದಿವ್ಯ ಸಾನಿಧ್ಯ ಅವರು ಮಾತನಾಡಿದರು.
ಸಾಧನೆಯ ಹಾದಿಯಲ್ಲಿ ಪ್ರೇರಣಾ ಶಕ್ತಿಯಾಗಿ ನಿಂತು, ದಾರಿ ದೀಪ ತೋರಿದ ಗುರುಗಳನ್ನು ಎಂದಿಗೂ ಮರೆಯ ಬಾರದು. ಗುರು ಕಾರ್ಯಕ್ರಮಗಳನ್ನು ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಶಿಷ್ಯರು ಗುರುಗಳಿಗೆ ನೀಡುವ ಗೌರವ, ಶ್ರದ್ಧೆ ನಿರಂತರವಾಗಿರಬೇಕು. ನಂಬಿಕೆ ಗುರು ಮತ್ತು ಶಿಷ್ಯನ ನಡುವಿನ ಕೊಂಡಿ ಎಂದು ಹೇಳಿದರು.
ಗುರು ಪರಂಪರೆ ಮೊದಲಿನಿಂದಲೂ ಬಂದಂತಹ ಒಂದು ಪರಂಪರೆಯಾಗಿದೆ. ಗುರು ಇರದೆ ಶಿಷ್ಯ ಇಲ್ಲ, ಆದ್ದರಿಂದ ಪ್ರತಿಯೊಬ್ಬರಿಗೂ ಗುರು ಇರಲೇಬೇಕು. ಯಾವುದೇ ಒಂದು ಕೆಲಸದ ಹಿಂದೆ ಒಳ್ಳೆಯ ಉದ್ದೇಶ ಇದ್ದರೆ ಮಾತ್ರ ಒಳ್ಳೆಯ ಗುರುವಿನ ಆಶೀರ್ವಾದ ಸಿಗಲು ಸಾಧ್ಯ ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಕಲಿಸಿ ಕೊಡುವುದು ಅತಿ ಮುಖ್ಯ ಅಗತ್ಯವಾಗಿದೆ ಎಂದು ಹೇಳಿದರು.
ಆಧ್ಯಾತ್ಮಿಕ ಚಿಂತಕರಾದ ಕಿರಣ್ ಕುಲಕರ್ಣಿ ಅವರು ಮಾತನಾಡಿ, ಗುರುವಿನ ಆಶೀರ್ವಾದ ಇದಾಗ ಮಾತ್ರ ಸಮಾಜದಲ್ಲಿ ನಾವು ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ, ನಮಗೆ ಶಿಕ್ಷಣದ ಮೌಲ್ಯಗಳನ್ನು ದಾರೆ ಎರೆಯುವವರು. ನಿತ್ಯವೂ ಗುರುವಿನ ನಾಮಸ್ಮರಣೆಯನ್ನು ಮಾಡಬೇಕು ಎಂದು ಹೇಳಿದರು. ಮಹಿಳೆಯರು ಇಷ್ಟೊಂದು ಸಾಮಾಜಿಕ ಕಾರ್ಯಗಳಲ್ಲಿ ತೋಡಗಿರುವುದು ನನಗೆ ಅತೀವ ಸಂತೋಷವಾಗಿದೆ. ಈ ಸಂಘಟನೆ ಮುಂದಿನ ದಿನಗಳಲ್ಲಿಎತ್ತರಕ್ಕೆ ಬೆಳೆಯಲಿ ಎಂದು ಹರಿಸಿದರು.
ಆಧ್ಯಾತ್ಮಿಕ ಚಿಂತಕರಾದ ಕಿರಣ್ ಕುಲಕರ್ಣಿ ಹಾಗೂ ಆರ್ಷ ಆಶ್ರಮದ ಸ್ವಾಮೀಜಿಯವರಿಗೆ ನಮ್ಮ ಎರಡು ಸಂಸ್ಥೆಗಳ ವತಿಯಿಂದ ಗುರು ವಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಮಾ ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಗುರುದಂಪತಿಗಳಾದ ಮಂಗಲ್ ಮಠದ್ ಮತ್ತು ಡಾಕ್ಟರ್ ರಾಜೇಂದ್ರ ಮಠದ ಸರ್ ಅವರಿಗೆ ಗುರು ವಂದನೆಯನ್ನು ಸಲ್ಲಿಸಲಾಯಿತು.
ಈ ವೇಳೆ ಅಧ್ಯಕ್ಷರಾದ ಮಂಗಲ್ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪ್ಗೊಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ, ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಮಾಡಿದರು. ಪ್ರಿಯಾ ಕುಲಕರ್ಣಿ ಮತ್ತು ಶೋಭಾ ಹತ್ತರಕ್ಕಿ ಅತಿಥಿಗಳ ಪರಿಚಯಿಸಿದರು.ಅಕ್ಷತಾ ಪಾಟೀಲ್ ನಿರೂಪಿಸಿದರು. ಸುಲೋಚನಾ ವಸ್ತ್ರಾದ ವಂದಿಸಿದರು. ಸದಸ್ಯರು ಆರ್ಷ ಸಿಬ್ಬಂದಿ ವರ್ಗ ಮತ್ತು ಆಶ್ರಮದ ಎಲ್ಲ ಮುದ್ದು ಮಕ್ಕಳು ಇತರರು ಇದ್ದರು.