BELAGAVI

ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ

Share

ಮನುಷ್ಯ ವರ್ತಮಾನದಲ್ಲಿ ಮಹಾದೊಡ್ಡವನಾದರೂ, ಭವಿಷ್ಯದಲ್ಲಿ ಅವರಿಗೆ ಭವಿಷ್ಯವಿರುವುದಿಲ್ಲ. ಅದರಲ್ಲಿ ಈ ನಾಡಿನಲ್ಲಿ ಭವಿಷ್ಯದಲ್ಲಿಯೂ ನೌಕರರಿಗೆ ಉಪಯೋಗವಾಗಲಿ ಎಂಬ ಕಾರ್ಯವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಾಡುತ್ತಿದೆ ಎಂದು ಶ್ರೀ ನಿಜಗುಣ ಪ್ರಭು ತೊಂಟದಾರ್ಯ ಮಹಾಸ್ವಾಮೀಜಿಗಳು ಅಭಿಪ್ರಾಯಪಟ್ಟರು.  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಯ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲಾ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿ ಪ್ರತಿಭಾ ಪುರಸ್ಕಾರ 2025ನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀ ನಿಜಗುಣ ಪ್ರಭು ತೊಂಟದಾರ್ಯ ಮಹಾಸ್ವಾಮೀಜಿಗಳು, ನೊಂದವರನ್ನು ನೋಯಿದವರಿಗಿಂತ ಬಲ್ಲವರು. ಒಂದು ಕುಟುಂಬ, ಒಂದು ರಾಷ್ಟ್ರಕ್ಕಾಗಿ ಜೀವ ಮಿಡಿಯುತ್ತದೆ. ಜಗಜ್ಯೋತಿ ಬಸವೇಶ್ವರರು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಹಲವಾರು ಕಷ್ಟಗಳನ್ನು ಅನುಭವಿಸಿದರೂ ಅವರಲ್ಲಿ ಸಮಾಜ ಕಟ್ಟುವ ತುಡಿತದ ಭಾವನೆಯಿತ್ತು. ಮನುಷ್ಯ ವರ್ತಮಾನದಲ್ಲಿ ಮಹಾದೊಡ್ಡವನಾದರೂ, ಭವಿಷ್ಯದಲ್ಲಿ ಅವರಿಗೆ ಭವಿಷ್ಯವಿರುವುದಿಲ್ಲ. ಅದರಲ್ಲಿ ಈ ನಾಡಿನಲ್ಲಿ ಭವಿಷ್ಯದಲ್ಲಿಯೂ ನೌಕರರಿಗೆ ಉಪಯೋಗವಾಗಲಿ ಎಂಬ ಕಾರಣಕ್ಕೆ ದುಡಿಯುತ್ತಿರುವವರು ಷಡಾಕ್ಷರಿಯವರು ಎಂದರು.

ಇನ್ನು ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿಯವರು ಕಳೆದ ಬಾರಿ ಚುನಾವಣೆಯಲ್ಲಿ ಹೇಳಿದಂತೆ ಈ ಬಾರಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ಬಾರಿ ಗೆಲ್ಲಿಸಿದರೇ, 1 ಕೋಟಿ ವಿಮಾ ಪರಿಹಾರ ಜಾರಿಗೆ ತರಲಾಗುವುದು. ಇನ್ನು ಹಳೆಯ ಪಿಂಚಣಿ ಪದ್ಧತಿಯನ್ನೇ ಜಾರಿಗೊಳಿಸಲು ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ. ಜುಲೈ 19 ರಂದು ಸಿಎಂ ಅವರೊಂದಿಗೆ ಸಭೆ ನಡೆಸಲಾಗುವುದು. ಎನ್.ಪಿ.ಎಸ್. ಓ.ಪಿ.ಎಸ್. ಆಗುವವರೆಗೂ ಹೋರಾಟ ನಿರಂತರವಾಗಿದೆ. 20 ಲಕ್ಷ ಸಾಲ ಸಂಘದ ಮೇಲಿತ್ತು. ಆದರೀಗ 25 ಕೋಟಿ ಹಣವನ್ನು ಉಳಿತಾಯವನ್ನು ಮಾಡಿದೆ. ಈ ಮೂಲಕ ಸಂಘಟನೆಯನ್ನು ಒಂದು ಶಕ್ತಿಯಾಗಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ್ ರಾಯವ್ವಗೋಳ, ಚಿಕ್ಕೋಡಿ ವಿಭಾಗೀಯ ಉಪಾಧ್ಯಕ್ಷರಾದ ಬಿ.ಎ.ಕುಂಬಾರ್, ಕಾರ್ಯದರ್ಶಿ ಶಂಕರ ಗೋಕಾವಿ, ಗಿರಿಗೌಡ ಎಚ್, ವ್ಹಿ.ವ್ಹಿ. ಶಿವರುದ್ರಯ್ಯ, ಎಸ್. ಬಸವರಾಜು, ಮಲ್ಲಿಕಾರ್ಜುನ ಬಳ್ಳಾರಿ, ನಾಗರಾಜ್ ಜುಮ್ಮನ್ನವರ, ಸುರೇಶ್ ಶೆಡಶ್ಯಾಳ, ಎನ್.ನರಸಿಂಹರಾಜು, ಆರ್. ಮೋಹನ್ ಕುಮಾರ್ ಇನ್ನುಳಿದವರು ಉಪಸ್ಥಿತರಿದ್ಧರು

Tags:

error: Content is protected !!