Athani

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸ್ವಾಮೀಜಿ ಅಸಮಾಧಾನ

Share

ನಮ್ಮನ್ನ ಒಡೆಯುವ ಕೆಲಸ ಸಿಎಂ ಮಾಡಿದ್ದಾರೆ.
ಅಸಂವಿಧಾನಿಕ ಹೋರಾಟ ಎಂದು ಅಧಿವೇಶನದಲ್ಲಿ ಮಾತನಾಡಿದ್ದಾರೆ ಅದಕ್ಕಾಗಿ ನಾವು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಇರುವವರೆಗೂ ಮೀಸಲಾತಿ ಕೇಳಲ್ಲ ಎಂದ ಆಕ್ರೋಶ ಹೊರಹಾಕಿದ್ದಾರೆ.

ಚಳಿಗಾಲದ ಅಧಿವೇಶನದ ‌ಹೋರಾಟದಲ್ಲಿ
ಡಿಸೆಂಬರ್ 10 ರಂದು ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿ ಚಾರ್ಜ್ ಆಗಿದೆ.
ಡಿ.10ರಂದು ನಾವು ಲಿಂಗಾಯತ ಕರಾಳ ದಿನಾಚರಣೆ ಎಂದು ಆಚರಿಸುತ್ತೆವೆ.

50 ಸಾವಿರ ಪಂಚಮಸಾಲಿ ಹೋರಾಟಗಾರರು ಬಾವುಟ ಜೊತೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡುತ್ತೆವೆ.ಸಮಾಜದ ಅನ್ನ ಉಂಡವರು ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದಾರೆ.
ಮುತ್ತಿಗೆ ಪ್ರತಿಭಟನೆ ಅನ್ನುವುದಕ್ಕಿಂತ ಸಮಾಜ ಜಾಗೃತಗೊಳಿಸುವ ಕೆಲಸ ಮಾಡ್ತಿವಿ‌.
ಪಂಚಮಸಾಲಿ ಶಾಸಕರು ಸಮಾಜದ ಋಣ ತೀರಿಸುವ ಕೆಲಸ ಮಾಡಲಿ.ಋಣ ತೀರಿಸುವ ಕೆಲಸ ಮಾಡಿದ್ರೆ ಇತಿಹಾಸದದಲ್ಲಿ ಉಳಿಯುತ್ತಿರಿ ಇಲ್ಲಾಂದ್ರೆ ಅಳಿಯುತ್ತಿರಿ.ಮೀಸಲಾತಿಗಾಗಿ 8ನೇ ಹಂತದ ಹೋರಾಟದ ಕುರಿತು ರೂಪುರೇಷಗಳನ್ನ ಮಾಡಿಕೊಳ್ಳಲಾಗಿದೆ.ನಮ್ಮ ಹೋರಾಟ ನಿರಂತರವಾಗಿರುತ್ತದೆ.ಎಂದು ಅಸಮಾಧಾನ ಹೊರ ಹಾಕಿದರು.

Tags:

error: Content is protected !!