Banglore

ಸಚಿವ ಸತೀಶ್ ಜಾರಕಿಹೊಳಿಯೊಂದಿಗೆ ಸುರ್ಜೆವಾಲಾ ಒನ್ ಟು ಒನ್…

Share

ಸುರ್ಜೆವಾಲಾ ಅವರು ಏನು ಹೇಳಿಲ್ಲ. ನಾನು ನನ್ನ ಇಲಾಖೆಯ ಬಗ್ಗೆ ಮಾತನಾಡಿದ್ದೇನೆ. ನನ್ನ ವ್ಯಾಲಿವೇಷನ್ ಮಾಡಿಲ್ಲ. ನಮ್ಮ ತಪ್ಪುಗಳನ್ನು ಹೇಳಿದರೇ, ನಮಗೆ ಗೊತ್ತಾಗುತ್ತದೆ. ಕ್ಯಾನ್ಸರ್ ಬರುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಲ್ಲ. ಕ್ಯಾನ್ಸರ್ ಫಸ್ಟ್ ಮತ್ತು ಥರ್ಡ್ ಸ್ಟೇಜ್’ಗೆ ಬಂದರೇ ಕಷ್ಟ ಅಲ್ವಾ ಎಂದು ಲೋಕೋಪಯೋಗಿ ಮತ್ತು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಎರಡನೇಯ ದಿನವು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್’ಸಿಂಗ್ ಸುರ್ಜೆವಾಲಾ ಅವರು ಸಚಿವರೊಂದಿಗೆ ಒನ್ ಟು ಒನ್ ಮೀಟಿಂಗ್ ಮುಂದುವರೆಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಅರ್ಧ ಗಂಟೆ ಸಮಾಲೋಚನೆಯನ್ನು ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಸುರ್ಜೆವಾಲಾ ಅವರು ಏನು ಹೇಳಿಲ್ಲ. ನಾನು ನನ್ನ ಇಲಾಖೆಯ ಬಗ್ಗೆ ಮಾತನಾಡಿದ್ದೇನೆ. ನನ್ನ ವ್ಯಾಲಿವೇಷನ್ ಮಾಡಿಲ್ಲ. ನಮ್ಮ ಶಾಸಕರು ಆರೋಪ ಮಾಡಿದ್ದರು. ಅದಕ್ಕೆ ಅವರನ್ನು ಕರೆದಿದ್ದರು. ನಮ್ಮ ತಪ್ಪುಗಳನ್ನು ಹೇಳಿದರೇ, ನಮಗೆ ಗೊತ್ತಾಗುತ್ತದೆ. ಕ್ಯಾನ್ಸರ್ ಬರುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಲ್ಲ. ಕ್ಯಾನ್ಸರ್ ಫಸ್ಟ್ ಮತ್ತು ಥರ್ಡ್ ಸ್ಟೇಜ್’ಗೆ ಬಂದರೇ ಕಷ್ಟ ಅಲ್ವಾ ಎಂದಿದ್ದಾರೆ.

Tags:

error: Content is protected !!