BELAGAVI

ಓಡಿಶಾದಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ…

Share

ಓಡಿಶಾದ ವಿದ್ಯಾರ್ಥಿನಿಯ ಅತ್ಯಾಚಾರವೆಸಗಿದ ಎನ್.ಎಸ್.ಯು.ಐ ಅಧ್ಯಕ್ಷನಿಗೆ ಜೀವಾವಧಿ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದ ಇಂದು ಬೆಳಗಾವಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಷತ್ತಿನ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಸೋಮವಾರದಂದು ಬೆಳಗಾವಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಷತ್ತಿನ ವತಿಯಿಂದ ಪ್ರತಿಭಟನೆಯನ್ನು ನಡೆಸಿ ಓಡಿಶಾದ ವಿದ್ಯಾರ್ಥಿನಿಯ ಅತ್ಯಾಚಾರವೆಸಗಿದ ಎನ್.ಎಸ್.ಯು.ಐ ಅಧ್ಯಕ್ಷನಿಗೆ ಜೀವಾವಧಿ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಎಬಿವ್ಹಿಪಿ ಅಧ್ಯಕ್ಷ ಪ್ರಥಮ್ ಪಾಟೀಲ್ ಕಾಂಗ್ರೆಸ್ ಸರ್ಕಾರ ಸರ್ಕಾರಿ ಕಾಲೇಜುಗಳನ್ನು ಚುನಾವಣೆ ಮಾಡಲು ಮುಂದಾಗಿದೆ. ಆದರೇ, ಓಡಿಶಾದಲ್ಲಿ ಎನ್.ಎಸ್.ಯು.ಐ ಅಧ್ಯಕ್ಷನಿಂದಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ. ಸಮಾಜದಲ್ಲಿ ಕಾಂಗ್ರೆಸ್ ಸರ್ಕಾರ ಇಂತಹ ಅತ್ಯಾಚಾರಿಗಳ ಬೆನ್ನಿಗ ನಿಲ್ಲದೇ, ಅತ್ಯಾಚಾರವೆಸಗಿದೆ ಎನ್.ಎಸ್.ಯು.ಐ ಅಧ್ಯಕ್ಷನಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಬಿವ್ಹಿಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

Tags:

error: Content is protected !!