Belagavi

ರಾಜ್ಯ ಮಟ್ಟದ ಜ್ಯೂಡೋ ಚಾಂಪಿಯನಶಿಪ್

Share

ಅಮೆಚೂರ ಜ್ಯೂಡೋ ಅಸೋಸಿಯೇಷನ್ ವತಿಯಿಂದ ಜು. 25 ರಿಂದ 28 ವರೆಗೆ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಜ್ಯೂಡೋ ಚಾಂಪಿಯನಶಿಪ್ ಆಯೋಜಿಸಲಾಗಿದೆ ಎಂದು ಡಾ. ಪ್ರಕಾಶ ಮುಗಳಿ ಹೇಳಿದರು.

ಮಂಗಳವಾರ ಬೆಳಗಾವಿಯ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಮಟ್ಟದ ಜುಡೋ ಚಾಂಪಿಯನಶಿಪ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 800 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಜೂಡೋದಲ್ಲಿ ಭಾಗಿಯಾಗುವ ಕ್ರೀಡಾಪಟುಗಳಿಗೆ ಹಾಗೂ ತರಬೇತಿದಾರರಿಗೆ ಉಚಿತ ವಸತಿ ಉಟ ಸೇರಿದಂತೆ ಇನ್ನಿತರ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಮೆಚೂರ ಜ್ಯೂಡೋ ಅಸೋಸಿಯೇಷನ್ ಉಪಾಧ್ಯಕ್ಷ ಬಸವರಾಜ ಕಡಲಿ ಮಾತನಾಡಿ, ಅಮೆಚೂರ ಜ್ಯೂಡೋ ಅಸೋಸಿಯೇಷನ್ ಇತ್ತೀಚೆಗೆ ಬೆಳೆದ ಸಂಸ್ಥೆ. ನಮ್ಮ ಸಂಸ್ಥೆಯಿಂದ ಜ್ಯೂಡೋ ಕ್ರೀಡಾಪಟಿಗಳಿಗೆ ಪ್ರೋತ್ಸಾಹ ನೀಡಿಕೊಂಡು ಬಂದಿದ್ದೇವೆ ಈ ರೀತಿ ಚಾಂಪಿಯನಶಿಪ್ ಆಗಿರಲಿಲ್ಲ. ಎಲ್ಲರಿಗೂ ವೈಯಕ್ತಿಕವಾಗಿ ಸಂಪರ್ಕ ಮಾಡಿ ಆಹ್ವಾನ ನೀಡಲಾಗಿದೆ ಎಂದರು‌

ಜ್ಯೂಡೋ ತರಬೇತಿದಾರೆ ರೋಹಿಣಿ ಪಾಟೀಲ್ ಮಾತನಾಡಿ, ಮುಂಬರುವ ದಿನಗಳಲ್ಲಿ ಭಾರತದಲ್ಲಿ ನಡೆಯುವ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಹೆಚ್ಚಿನ ಪದಕ ಭಾರತ ಗಳಿಸಬೇಕೆಂದು ಕೇಂದ್ರ ಸರ್ಕಾರ ಕ್ರೀಡಾಪಟ್ಟುಗಳಿಗೆ ವಿಶೇಷ ಒತ್ತು ನೀಡಲಾಗಿದೆ ಆ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜ್ಯೂಡೋ ಕ್ರೀಡಾಪಟ್ಟುಗಳು ಭಾಗವಹಿಸಬೇಕು ಜ್ಯೂಡೋ ಆಡುವವರ ಸಂಖ್ಯೆ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದ್ದಾರೆ. ಜ್ಯೂಡೋ ಚಾಂಪಿಯನಶಿಪ್ ನಲ್ಲಿ ವಿಜೇತರಾಗುವ ಕ್ರೀಡಾಪಟುಳಿಗೆ ಬಹುಮಾನ‌ ವಿತರಿಸಲಾಗುವುದು ಎಂದರು.

ರುತುಜಾ ಮುಲ್ತಾನಿ ಮಾತನಾಡಿ, ರೋಹಿಣಿ ಪಾಟೀಲ ನಾನು ಇಬ್ಬರು ಜ್ಯೂಡೋ ಕಲಿತು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಜ್ಯೂಡೋ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿದ್ದೇವೆ ನಾವು ಕಲಿತ ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿದಾರರಾಗಿ ಬಂದಿದ್ದೇವೆ ಎಂದರು

ಬೈರವಿ ಮುಜಮ್ಮದಾರ, ಪೂಜಾ‌ ಗಾವಡೆ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:

error: Content is protected !!