Chikkodi

ಚಿಕ್ಕೋಡಿ: ಕಡಲೆ ಬೀಜ ವಿತರಣೆ ಸಂಧರ್ಭದಲ್ಲಿ ನೂಕುನುಗ್ಗಲು,ಕಾಲ್ತುಳಿತ

Share

ಚಿಕ್ಕೋಡಿ: ನಿಪ್ಪಾಣಿಯ ರೈತ ಸಂಪರ್ಕ ಕೇಂದ್ರದಲ್ಲಿ ಕಡಲೆಕಾಯಿ ಬೀಜ ವಿತರಣೆಯ ಸಂಧರ್ಭದಲ್ಲಿ ಭಾರಿ ಪ್ರಮಾಣದಲ್ಲಿ ನೂಕುನುಗ್ಗಲುವಾಗಿ,ಕಾಲ್ತುಳಿತ ಸಂಭವಿಸಿದೆ.

ಕಡಲೆಕಾಯಿ ಬೀಜ‌ ವಿತರಣೆಯ ಸಂಧರ್ಭದಲ್ಲಿ ಸರದಿ ಸಾಲಿನಲ್ಲಿ ಜನರು ನಾ ಮುಂದೆ ನಿ‌ ಮುಂದೆ ಎನ್ನುತ್ತಾ ಕಾಲ್ತುಳಿತಕ್ಕೆ ಕಾರಣವಾಯಿತು. ಇದೇ ಸಂಧರ್ಭದಲ್ಲಿ ಕೆಲ ಮಹಿಳೆಯರ ಕೆಳಗೆ ಬಿದ್ದರು.ಅದೃಷ್ಟವಶಾತ ಈ ಘಟನೆಯಿಂದ ಯಾವುದೇ ಗಾಯಗಳಾಗಿಲ್ಲ.ರೈತ ಸಂಪರ್ಕ ಕೇಂದ್ರದಲ್ಲಿ 500 ರೂಪಾಯಿಗಾಗಿ 30 ಕೆಜಿ ಕಡಲೆ ಬೀಜ ವಿತರಣೆ ಮಾಡಲಾಗುತ್ತಿತ್ತು.

ಮುಂಜಾನೆಯಿಂದಲೇ ಕಡಲೆಕಾಯಿ ಬೀಜಗಳನ್ನು ಖರೀದಿಸಲು ಭಾರಿ ಪ್ರಮಾಣದಲ್ಲಿ ಜನ ಸೇರಿತ್ತು. ಮಹಿಳೆಯರು,ಪುರುಷರು ಕಂಪೌಂಡ, ಗೇಟ ಏರಿ ಬೀಜ ಕೊಳ್ಳಲು ಮುಂದಾದರು.ಇದೇ ಸಂಧರ್ಭದಲ್ಲಿ ನೂಕು ನುಗ್ಗಲು ಸಂಭವಿಸಿತ್ತು.ವಿಷಯ ತಿಳಿದ ಪೊಲೀಸರು ‌ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Tags:

error: Content is protected !!