– ಕೊಟ್ಟ ಸಾಲದ ಹಣ ಕೇಳಲು ಹೋಗಿ ಸಾಲ ಪಡೆದಕೊಂಡವಮ್ನು ಸಿಗದಿದ್ದ ಸಮಯದಲ್ಲಿ ಹಣ ಪಡೆದ ತಮ್ಮಣೊಂದಿಗೆ ಕಿರಿಕಾಗಿ ಆತನಿಗೆ ಸಾಲ ನೀಡಿದ ಯುವಕ ಚಾಕು ಇರಿದು ಪರಾರಿಯಾದ ಘಟನೆ ಧಾರವಾಡದಲ್ಲಿಂದು ಹಾಡಹಲೇ ನಡೆದಿದ್ದು, ಚಾಕು ಇರಿತದಿಂದ ಸ್ಥಳೀಯರು ಬೆಚ್ಚಿಬಿದಿದ್ದಾರೆ.
ಧಾರವಾಡ ನಗರದ ಕಂಠಿಗಲ್ಲಿಯಲ್ಲಿ ಈ ದುರ್ಘಟನೆ ನಡೆದಿದೆ. ಕಂಠಿಗಲ್ಲಿಯ ನಿವಾಸಿ ರಾಘವೇಂದ್ರ ಗಾಯಕವಾಡ (25) ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದಾನೆ. ಇನ್ನೂ ಮಲ್ಲೀಕ್ ಎಂಬಾತನೇ ಕಂಠಿಗಲ್ಲಿಯ ಯುವಕನ ಬೆನ್ನಿಗೆ ಚಾಕು ಇರಿದಿದ್ದಾನೆ. ಅರ್ಧ ಕಟ್ ಆದ ಚಾಕು ರಾಘವೇಂದ್ರನ ಬೆನ್ನಿನಲ್ಲೇ ಉಳಿದಿದೆ. ಇನ್ನರ್ಧ ಚಾಕು ಕೆಳಗಡೆ ಬಿದ್ದಿದೆ. ಇನ್ನೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಚಾಕು ದಾಳಿ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಚಾಕು ಇರಿದಿರುವ ಆರೋಪಿ ಮಲ್ಲಿಕ ಚಾಲು ಇರಿತಕ್ಕೆ ಒಳಗಾದ ರಾಘವೇಂದ್ರ ಅಣ್ಣನಿಗೆ ಸಾಲ ನೀಡಿದನಂತೆ. ಈ ಸಾಲದ ಹಣ ಕೇಳಲು ಮಲ್ಲಿಕ ರಾಘವೇಂದ್ರ ಮನೆಗೆ ತೆರೆಳಿದ್ದಾನೆ. ಈ ವೇಳೆ ರಾಘವೇಂದ್ರ ಹಾಗೂ ಮಲ್ಲಿಕ ನಡುವೆ ನಡುವೆ ಕಿರಿಕಾಗಿದೆ. ಮಲ್ಲೀಕ್ ಏಕಾಏಕಿ ಚಾಕುವಿನಿಂದ ರಾಘವೇಂದ್ರನಿಗೆ ಇರಿದು ಪರಾರಿಯಾಗಿದ್ದಾನೆ. ಸದ್ಯ ರಾಘವೇಂದ್ರನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ
ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಡಿಸಿಪಿ ರವೀಶ್, ಎಸಿಪಿ ಪ್ರಶಾಂತ ಸಿದ್ಧನಗೌಡರ, ಉಪನಗರ ಠಾಣೆ ಇನ್‌ಸ್ಪೆಕ್ಟರ್ ದಯಾನಂದ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತಂತೆ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ